ಅಲ್ಪಸಂಖ್ಯಾತ ವೈದ್ಯಕೀಯ ವಿದ್ಯಾರ್ಥಿಗಳ ಸಾಲದ ಮೊತ್ತ 3 ಲಕ್ಷ ರೂ.ನಿಂದ 5 ಲಕ್ಷಕ್ಕೆ ಹೆಚ್ಚಳ: ಜಮೀರ್ ಅಹ್ಮದ್ ಖಾನ್ ಸುಳಿವು

Prasthutha|

ಬೆಂಗಳೂರು : ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು (KMDC) ವೈದ್ಯಕೀಯ (MBBS) ಓದುತ್ತಿರುವ ಅರ್ಹ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸಾಲದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಕರ್ನಾಟಕ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸುಳಿವು ನೀಡಿದ್ದಾರೆ.

- Advertisement -

ಪ್ರಸ್ತುತ 3 ರೂಪಾಯಿ ವರೆಗೆ ಸಾಲ ನೀಡಲಾಗುತ್ತಿದ್ದು, ಇದನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಯೋಜನೆ ಇದೆ. ಸಾಲದ ಮೊತ್ತದ ಹೆಚ್ಚಳವು ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ.

ಸಾಗರೋತ್ತರ ಅಧ್ಯಯನಕ್ಕಾಗಿ ಮೀಸಲಾದ ಶೈಕ್ಷಣಿಕ ಸಾಲದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಮತ್ತೊಂದು ಪ್ರಸ್ತಾವನೆ ಇದೆ. ಕೆಎಂಡಿಸಿ ನೀಡುತ್ತಿರುವ ಸಾಲದ ಮೊತ್ತವನ್ನು ಈಗಿರುವ 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಖಾನ್ ಹೇಳಿದ್ದಾರೆ.

Join Whatsapp