ನವೆಂಬರ್ 15 ರಂದು ನಡೆಯುವ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಸ್ಥಾನದ ಆಕಾಂಕ್ಷಿಗಳು, ಅದರಲ್ಲೂ ಇದ್ದ ಎಲ್ಲಾ ಅಧಿಕಾರಗಳು ಕೈತಪ್ಪಿ ಖಾಲಿಯಾಗಿರುವ ಸಿಟಿ ರವಿ ಅವರು ಆಗಮಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು.
ಈ ಬಗ್ಗೆ ಸ್ವತಃ ಸಿಟಿ ರವಿ ಅವರೇ ಮಾತನಾಡಿದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ನಾನು ಹೋಗಲ್ಲ ಎಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ನನ್ನ ಜೊತೆ ಎರಡು ಬಾರಿ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಆದರೆ, ನ.15ರ ರಾತ್ರಿವರೆಗೂ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಇದೆ. ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲ್ಲ. ಈ ಬಗ್ಗೆ ಅವರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.