6 ರಾಜ್ಯಗಳ, 7 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆ

Prasthutha|

ನವದೆಹಲಿ:  ಖಾಲಿ ಇರುವ ಆರು ರಾಜ್ಯಗಳ ಏಳು ವಿಧಾನ ಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆಯನ್ನು   ಭಾರತೀಯ ಚುನಾವಣಾ ಆಯೋಗ ಸೋಮವಾರ ಘೋಷಣೆ ಮಾಡಿದೆ. ನವೆಂಬರ್ 6ರಂದು ಮತ ಎಣಿಕೆ ನಡೆಯಲಿದೆ.

- Advertisement -

ಮಹಾರಾಷ್ಟ್ರದ ಅಂಧೇರಿ ಪೂರ್ವ, ಬಿಹಾರದ ಮೋಕಮಾ ಮತ್ತು ಗೋಪಾಲ್ ಗಂಜ್, ಹರಿಯಾಣದ ಆದಂಪುರ್, ತೆಲಂಗಾಣದ ಮುನೊಗೋಡ್, ಉತ್ತರ ಪ್ರದೇಶದ ಗೋಲಾ ಗೋಕರನಾಥ್, ಒಡಿಶಾದ ದಾಮ್ ನಗರ ಚುನಾವಣೆ ನಡೆಯುಲಿರುವ ವಿಧಾನ ಸಭಾ ಕ್ಷೇತ್ರಗಳಾಗಿವೆ.

ಶುಕ್ರವಾರ ಸುತ್ತೋಲೆ ಹೊರಡಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 14 ಕೊನೆಯ ದಿನ. ನಾಮಪತ್ರ ಪರಿಶೀಲನೆ ಅಕ್ಟೋಬರ್ 15ರಂದು ನಡೆದರೆ, ಅಕ್ಟೋಬರ್ 17 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.



Join Whatsapp