13 ವಿಧಾನಸಭಾ ಸ್ಥಾನಗಳ ಉಪ ಚುನಾವಣೆ: 10 ಸ್ಥಾನ ಗೆದ್ದ ಇಂಡಿಯಾ ಮೈತ್ರಿಕೂಟ

Prasthutha|

ನವದೆಹಲಿ: ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 10 ಸ್ಥಾನಗಳನ್ನ ಗೆದ್ದಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಷ್ಟೇ ಜಯಗಳಿಸಿದೆ.

- Advertisement -

ಮಧ್ಯಪ್ರದೇಶದ ಅಮರವಾರ (ಎಸ್‌ಟಿ) ಕ್ಷೇತ್ರವನ್ನು ಬಿಜೆಪಿಯ ಕಮಲೇಶ್ ಶಾ ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಧೀರನ್ ಶಾ ಇನ್ವಟಿ ಅವರನ್ನು 3,252 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಪಂಜಾಬ್‌ನ ಜಲಂಧರ್ ಕ್ಷೇತ್ರದಲ್ಲಿ ಆಮ್ ಆದಿ ಪಕ್ಷದ ಮೋಹಿಂದರ್ ಭಗತ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸುರೀಂದರ್ ಕೌರ್ ಅವರನ್ನು 35,325 ಮತಗಳ ಅಂತರದಿಂದ ಗೆಲುವು ಸಾಧಿಸಿ ಇಂಡಿಯಾ ಮೈತ್ರಿಕೂಟದ ಗೆಲುವಿಗೆ ಮುನ್ನುಡಿ ಬರೆದಿದ್ದರು.

- Advertisement -

ಹಿಮಾಚಲ ಪ್ರದೇಶ:

ಹಿಮಾಚಲ ಪ್ರದೇಶದಲ್ಲಿ 3 ವಿಧಾನಸಭಾ ಕ್ಷೇತ್ರಗಳಲ್ಲಿ 2 ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟ ಜಯಗಳಿಸಿದೆ. ಡೆಹ್ರಾಡೂನ್ ಮತ್ತು ನಲಘರ್ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಹಮೀರ್ಪುರವನ್ನು ಬಿಜೆಪಿಗೆ ಕಳೆದುಕೊಂಡಿದೆ.

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಡೆಹ್ರಾಡೂನ್’ನಲ್ಲಿ ಬಿಜೆಪಿಯ ಹೋಶ್ಯಾರ್ ಸಿಂಗ್ ವಿರುದ್ಧ 9,399 ಮತಗಳ ಅಂತರದಿಂದ ಗೆದ್ದಿದ್ದಾರೆ.

ನಲಘರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ದೀಪ್ ಸಿಂಗ್ ಬಾವಾ ಬಿಜೆಪಿಯ ಕೆಎಲ್ ಠಾಕೂರ್‌ನ್ನು 8,990 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಮೀರ್ಪುರ ಕ್ಷೇತ್ರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕ ಪುಷ್ಪಿಂದರ್ ವರ್ಮಾವನ್ನು 1,571 ಮತಗಳ ಅಂತರದಿಂದ ಸೋಲಿಸಿದ್ದಾರೆ‌

ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಬಂಡಾಯಗಾರರೊಂದಿಗೆ ಸ್ವತಂತ್ರ ಶಾಸಕರಾದ ಹೋಶ್ಯಾರ್ ಸಿಂಗ್, ಆಶಿಶ್ ಶರ್ಮಾ ಮತ್ತು ಕೆಎಲ್ ಠಾಕೂರ್ ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ ನಂತರ ಮೂರು ವಿಧಾನಸಭಾ ಸ್ಥಾನಗಳು ಖಾಲಿಯಾಗಿತ್ತು.

ಹಿಂದುಗಳ ಪುಣ್ಯ ಕ್ಷೇತ್ರಗಳೆಂದು ಪರಿಗಣಿಸಲಾದ ಉತ್ತರಾಖಂಡದ ಬದ್ರಿನಾಥ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲುವನ್ನು ಕಂಡಿದೆ. ಬದ್ರಿನಾಥದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಲಖಪತ್ ಸಿಂಗ್ ಬುಟೋಲಾ ಅವರು 3.5 ಸಾವಿರ ಮತಗಳಿಂದ ಗೆದ್ದಿದ್ದಾರೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ.

ಹಿಮಾಚಲ ಪ್ರದೇಶದ ಡೆಹ್ರಾ ಕ್ಷೇತ್ರದಲ್ಲಿ ಅಲ್ಲಿನ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸುಖವಿಂದರ್ ಸಿಂಗ್ ಸುಖು ಪತ್ನಿ ಕಮಲೇಶ್ ಠಾಕೂರ್ ಹಾಗೂ ಉತ್ತರಾಖಂಡದ ಬದ್ರಿನಾಥ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಲಖಪತ್ ಸಿಂಗ್ ಗೆಲುವು ಸಾಧಿಸಿದ್ದಾರೆ.



Join Whatsapp