2030ಕ್ಕೆ ವೈದ್ಯರಲ್ಲೂ ಬೃಹತ್ ಉದ್ಯೋಗ ಬಿಕ್ಕಟ್ಟು: ಡಾ.ಸಿ.ಎನ್. ಮಂಜುನಾಥ್ ಗಂಭೀರ ಹೇಳಿಕೆ

Prasthutha|

ಹಾಸನ: 2030ರ ವೇಳೆಗೆ ವೈದ್ಯರಿಗೂ ಬೃಹತ್ ನಿರುದ್ಯೋಗ ಬಿಕ್ಕಟ್ಟು ತಟ್ಟುವ ಸಾಧ್ಯತೆ ಇದೆ ಎಂದು ಸಂಸದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಗಂಭೀರ ಹೇಳಿಕೆ ನೀಡಿದ್ದಾರೆ.

- Advertisement -


ನಗರದ ಹಿಮ್ಸ್ ಸಭಾಂಗಣದಲ್ಲಿ ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 34ನೇ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.


”ದೇಶದಲ್ಲಿ ಪ್ರಸ್ತುತ 17 ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇವರು 2030ರ ವೇಳೆಗೆ ವಿದ್ಯಾಭ್ಯಾಸ ಮುಗಿಸಿ ಹೊರಬರುತ್ತಾರೆ. ಆದರೆ ಗುಣಮಟ್ಟದ ಶಿಕ್ಷಣ ಪಡೆಯದೇ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುವವರೇ ಹೆಚ್ಚಾಗುತ್ತಿದ್ದಾರೆ. ಇವರಿಂದ ಉತ್ತಮ ಸೇವೆ ನಿರೀಕ್ಷಿಸಬಹುದೇ?” ಎಂದು ಪ್ರಶ್ನಿಸಿದರು.

- Advertisement -


”ವೃತ್ತಿ ಶಿಕ್ಷಣ ಮುಗಿಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, 2030ರ ವೇಳೆಗೆ ವೈದ್ಯಕೀಯ ಕ್ಷೇತ್ರದಲ್ಲೂ ನಿರುದ್ಯೋಗ ಸಮಸ್ಯೆ ಕಾಡಲಿದೆ. ಅದನ್ನು ಪರಿಹರಿಸಲು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಸೇವೆ ಮಾಡಲು ಮುಂದೆ ಬರಬೇಕು. ವೈದ್ಯರಿಗೆ ನಿಧಾನಗತಿಯ ಜೀವನ ಮತ್ತು ಖ್ಯಾತಿ ತಂದುಕೊಂಡಲು ಗ್ರಾಮೀಣ ಪ್ರದೇಶಗಳು ಉತ್ತಮ ಅವಕಾಶ ನೀಡುತ್ತವೆ,” ಎಂದರು.



Join Whatsapp