2024ರ ವೇಳೆಗೆ ಭಾರತದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ನಿತಿನ್ ಗಡ್ಕರಿ

Prasthutha|

ನವದೆಹಲಿ: ಭಾರತದ ರಸ್ತೆಗಳು 2024ರ ಅಂತ್ಯದ ವೇಳೆಗೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

- Advertisement -


95ನೇ ಎಫ್ ಐಸಿಸಿಐ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಯನ್ನು ಮಾಡುತ್ತಿದ್ದೇವೆ. 2024ರ ಅಂತ್ಯದ ವೇಳೆಗೆ ನಮ್ಮ ರಸ್ತೆ ಮೂಲ ಸೌಕರ್ಯವು ಅಮೆರಿಕ, ಇಂಗ್ಲೆಂಡ್ ಗೆ ಸಮನಾಗಿರುತ್ತದೆ ಎಂದರು.


ಸರಕು ವೆಚ್ಚವು ನಮ್ಮ ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ 14 ಪ್ರತಿಶತವಿದೆ. ಆದರೆ 2024ರ ಅಂತ್ಯದ ವೇಳೆಗೆ 9 ಪ್ರತಿಶತಕ್ಕೆ ಇಳಿಕೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಎಂದು ಹೇಳಿದರು.



Join Whatsapp