ಬೆಂಗಳೂರು: ತೊಗರಿ ಬೇಳೆ ವ್ಯಾಪಾರದ ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ರೇವಾ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣವನ್ನುಬೇಧಿಸಿ ನಾಲ್ವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಯ ಅಪಹರಣ ಪ್ರಕರಣ ದಾಖಲಾದ 3 ಗಂಟೆಗಳಲ್ಲಿ ಚಿತ್ರದುರ್ಗ ಎಸ್.ಪಿ ಪರಶುರಾಮ್ ಹಾಗೂ ಐಮಂಗಲ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ಸಹಕಾರದಿಂದ ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ರಮೇಶ್ ರಾಥೋಡ್ (43), ರಿಜ್ವಾನ್ ಪಟೇಲ್(23), ಇಂದ್ರಜಿತ್ ಪವಾರ್(23), ಹರೀಶ್ ಕುಮಾರ್ (24) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 1 ಇನ್ನೋವ ಹಾಗೂ 1 ಫೋರ್ಚುನರ್ ಕಾರು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಈಶ್ಯಾನ ವಿಭಾಗ ಡಿಸಿಪಿ ಡಾ.ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ವಿದ್ಯಾರ್ಥಿಯ ತಂದೆ ಮಹಾರಾಷ್ಟ ಹಾಗೂ ಆಂಧ್ರಪ್ರದೇಶದಲ್ಲಿ ತೊಗರಿಬೇಳೆ ವ್ಯಾಪಾರ ನಡೆಸುತ್ತಿದ್ದು, ಆರೋಪಿ ರಮೇಶ್ ರಾಥೋಡ್ ಗೆ ವ್ಯಾಪಾರ ವಹಿವಾಟು ಸಂಬಂಧ 3 ಕೋಟಿ ಹಣ ನೀಡಬೇಕಿತ್ತು. ಈ ವಿಷಯಕ್ಕೆ ಸಂಬಂಧಿಸಿ ಗಲಾಟೆಯೂ ನಡೆದಿತ್ತು.
ಆದರೆ ನಿನ್ನೆ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಆರೋಪಿಗಳು ವಿದ್ಯಾರ್ಥಿಯನ್ನು ಅಪಹರಣ ಮಾಡಿದ್ದಾರೆ.
ತುಮಕೂರು ಹೊರ ವಲಯದಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿಯು ಪೊಲೀಸರ ಬಳಿ ಹೋಗಿ ನೀಡಿರುವ ಮಾಹಿತಿ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.