ಬಸ್ ನಲ್ಲಿ ಬೆಂಕಿ ಅವಘಡ: ಪ್ರಯಾಣಿಕರು ಪಾರು
Prasthutha: December 16, 2021

ಯಲ್ಲಾಪುರ: ಬಸ್ಸೊಂದು ಧಗ ಧಗನೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಜೊಡಕೆರೆ ಬಳಿ ಬೆಳಗ್ಗಿನ ಜಾವ ನಡೆದಿದೆ.
ಈ ಬಸ್ ಮುಂಬಾಯಿ ಯಿಂದ ಕೇರಳಕ್ಕೆ ಹೋಗುತ್ತಿತ್ತು. ಬಸ್ಸಿನಲ್ಲಿ 28 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು,ಪ್ರಯಾಣಿಕರಿಗೆ ಯಾವುದೇ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
