ಬಸ್ ಕಂಡಕ್ಟರ್ ಹೊಟ್ಟೆಗೆ ಚಾಕು ಹಾಕಿದ ಪ್ರಯಾಣಿಕ..!

Prasthutha|

ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ವೈಟ್ ಫಿಲ್ಡ್ ನಲ್ಲಿ ಮಂಗಳವಾರ ನಡೆದಿದೆ.

- Advertisement -


ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ವೈಟ್ ಫೀಲ್ಡ್ ನ ಐಟಿಪಿಎಲ್ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್ ನಲ್ಲಿ ಬಳಿ ಘಟನೆ ನಡೆದಿದೆ. ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ ಯೋಗೇಶ್(45) ಚಾಕು ಇರಿತಕ್ಕೆ ಒಳಗಾದವರು.


ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಜಾರ್ಖಡ್ ಮೂಲದ ಹರ್ಷ ಸಿನ್ಹಾ(25) ಎಂಬಾತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -


ಯುವಕ ಚಾಕು ಹಿಡಿದು ಬಸ್ಸಿನಲ್ಲಿ ನಿಂತಿದ್ದ ಪೋಟೊ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅನೇಕರು ಯುವಕನ ಕೃತ್ಯ ಖಂಡಿಸಿದ್ದಾರೆ.


ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ವಿಡಿಯೊ ಹಂಚಿಕೊಂಡು ಬಿಎಂಟಿಸಿ ಅವರು ಇನ್ನೂ ಏಕೆ ದೂರು ದಾಖಲಿಸಿಲ್ಲ ಎಂದು ಕಿಡಿಕಾರಿದ್ದಾರೆ. ಅನೇಕ ಉತ್ತರ ಭಾರತೀಯರು ಬೆಂಗಳೂರಿಗೆ ವಲಸೆ ಬಂದು ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



Join Whatsapp