ಕಾರಿಗೆ ಬಸ್ ಡಿಕ್ಕಿ: ಐವರು ಸ್ಥಳದಲ್ಲೇ ಸಾವು

Prasthutha|

ತುಮಕೂರು: ಖಾಸಗಿ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾಗಿ ಇನೋವಾ ಕಾರಿಗೆ ಗುದ್ದಿದ ಪರಿಣಾಮ ಮಗು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ ಬಳಿ ನಡೆದಿದೆ.

- Advertisement -

ತುಮಕೂರು ಕಡೆಯಿಂದ ಬೆಂಗಳೂರಿಗೆ ತೆರಳುತಿದ್ದ ಇನೋವಾ ಕಾರಿಗೆ ಬೆಂಗಳೂರು ಕಡೆಯಿಂದ ತುಮಕೂರಿಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ.

ಮೃತರನ್ನು ಚಳ್ಳಕೆರೆ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಗೋವಿಂದನಾಯ್ಕ್,(58) ಅವರ ಪತ್ನಿ ತಿಪ್ಪಮ್ಮ(52) ಹಾಗೂ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿದ್ದು, ಉಳಿದವರ ಹೆಸರು ಪತ್ತೆಯಾಗಿಲ್ಲ.
ಕಾರ್ಯನಿಮಿತ್ತ ಚಳ್ಳಕೆರೆಗೆ ಬಂದಿದ್ದ ಗೋವಿಂದನಾಯ್ಕ ದಂಪತಿಗಳು ಬೆಂಗಳೂರಿಗೆ ಮರಳುವಾಗ ಈ ದುರ್ಘಟನೆ ನಡೆದಿದೆ.

- Advertisement -

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಎಎಸ್‌ಪಿ ಮರಿಯಪ್ಪ, ಡಿವೈಎಸ್‌ಪಿ ಶ್ರೀನಿವಾಸ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Join Whatsapp