ಬ್ಲಾಕ್ ಫಂಗಸ್ ಉಂಟಾಗಲು ಸಗಣಿ ಸುಡುವುದೇ ಮೂಲ ಕಾರಣ…!

Prasthutha|

ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಸಮಯದಲ್ಲಿ ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಸಾಂಕ್ರಾಮಿಕ ಉಂಟಾಗುವುದಕ್ಕೆ ಕಾರಣ, ಹೆಚ್ಚು ಪ್ರಮಾಣದಲ್ಲಿ ಹಸುವಿನ ಸಗಣಿ ಸುಟ್ಟಿರುವುದು ಮತ್ತು ಕೊರೊನಾ ಸಮಯದಲ್ಲಿ ನೀಡಲಾದ ಸ್ಟಿರಾಯ್ಡಗಳು ಎಂದು ವರದಿಗಳು  ತಿಳಿಸಿವೆ.

- Advertisement -

“ಅಮೆರಿಕನ್‌ ಸೊಸೈಟಿ ಆಫ್ ಮೈಕ್ರೋಬಯೋಲಜಿ’ ಪ್ರಕಟಿಸಿರುವ ವರದಿಯ ಪ್ರಕಾರ “”ಬೇರೆ ದೇಶಗಳಲ್ಲೂ ಸ್ಟಿರಾಯ್ಡ್ ಬಳಕೆಯಾಗಿದೆಯಾದರೂ ಭಾರತದಲ್ಲಿ ಹೆಚ್ಚಾಗಿ ಶಿಲೀಂಧ್ರಗಳಿಂದ ಸಾಂಕ್ರಾಮಿಕ ಕಾಣಿಸಿಕೊಂಡಿದೆ.

ಶಿಲೀಂಧ್ರದ ಮಾದರಿಗಳಲ್ಲೊಂದಾದ ಮ್ಯೂಕುರೇಲ್ಸ್‌ ಸಮೃದ್ಧವಾಗಿರುವ ಸಗಣಿಯಂತಹ ವಸ್ತು  ಸುಡುವುದರಿಂದ ಈ ರೀತಿ ಸಮಸ್ಯೆಯಾಗಿದೆ. ಇದು ಹೆಚ್ಚು ಜನರಲ್ಲಿ ಸಕ್ಕರೆ ಕಾಯಿಲೆಗೆ ಕಾರಣವಾಗಬಹುದು” ಎಂದು ಹೇಳಲಾಗಿದೆ.

- Advertisement -

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆಸ್ಪತ್ರೆಗಳ ಸುತ್ತಲಿನ ಗಾಳಿಯಲ್ಲಿ ಮ್ಯೂಕುರೇಲ್ಸ್‌ ಅಂಶ ಶೇ. 51.8 ಹೆಚ್ಚಿದೆ ಎಂದು ವರದಿಗಳು ಹೇಳಿವೆ.



Join Whatsapp