ಕಾಬೂಲ್: ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ತಾಲಿಬಾನ್ ತನ್ನ ಆಡಳಿತ ಹೇಗಿರಲಿದೆ ಎಂಬ ಮುನ್ಸೂಚನೆ ನೀಡಿದ್ದು, ದೇಶದಲ್ಲಿ ಮಹಿಳೆಯರಿಗೆ ಪೂರ್ಣ ಬುರ್ಖಾ ಕಡ್ಡಾಯಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಹಿಳೆಯರು “ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣವನ್ನು ಪಡೆಯಬಹುದು. ನಾವು ಈ ನೀತಿಯನ್ನು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ, ಮಾಸ್ಕೋ ಸಮ್ಮೇಳನದಲ್ಲಿ ಮತ್ತು ಇಲ್ಲಿ ದೋಹಾ ಸಮ್ಮೇಳನದಲ್ಲಿ (ಅಫ್ಘಾನಿಸ್ತಾನದಲ್ಲಿ) ಘೋಷಿಸಿದ್ದೇವೆ ಎಂದು ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರ ಸುಹೇಲ್ ಶಾಹೀನ್ ತಿಳಿಸಿದ್ದಾರೆ.
1996-2001ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್, ಮಹಿಳೆಯರು ಸಾರ್ವಜನಿಕವಾಗಿ ಇಡೀ ದೇಹ ಮುಚ್ಚುವ ಬುರ್ಖಾ ಧರಿಸಲು ಕಡ್ಡಾಯಗೊಳಿಸಲಾಗಿತ್ತು. ಆದರೆ ಈ ಬಾರಿ ಮಹಿಳೆಯರು ಸ್ವತಂತ್ರವಾಗಿ ಓಡಾಡಬಹುದು. ಉನ್ನ ಶಿಕ್ಷಣ ಸೇರಿದಂತೆ ಎಲ್ಲಾ ಹಂತಗಳ ವಿದ್ಯಾಭ್ಯಾಸ ಮಾಡಬಹುದು. ಬುರ್ಖಾ ಕಡ್ಡಾಯಗೊಳಿಸಿಲ್ಲ. ಸ್ಕಾರ್ಫ್ ಮಾತ್ರ ಧರಿಸಿದರೆ ಸಾಕು ಎಂದು ಹೇಳಿದೆ.