ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟ ಭೂಪ !

Prasthutha|

ಭೋಪಾಲ್: ತಾನು ಸಾಕಿದ ಎಮ್ಮೆ ಸರಿಯಾಗಿ ಹಾಲು ಕೊಡುತ್ತಿಲ್ಲ ಎಂದು ರೈತನೋರ್ವ  ಪೊಲೀಸ್ ಠಾಣೆಗೆ ತೆರಳಿ ಆ ಎಮ್ಮೆಯ ವಿರುದ್ಧವೇ ದೂರು ಕೊಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಬಾಬುಲಾಲ್ ಜಾತವ್ (45) ದೂರು ನೀಡಿದ ರೈತ ಎಂದು ಗುರುತಿಸಲಾಗಿದೆ.

ಆತ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಎಮ್ಮೆಹಾಲು ಕೊಡುತ್ತಿಲ್ಲ. ಇದರ ಮೇಲೆ ವಾಮಾಚಾರ ಮಾಡಿರಬಹುದು. ಅದರ ಪರಿಣಾಮವಾಗಿ ಅದು ಹಾಲು ನೀಡುತ್ತಿಲ್ಲ ಎಂದು ದೂರಿದ್ದಾನೆ.

- Advertisement -

ಪೊಲೀಸರ ಬಳಿ ಎಮ್ಮೆಯ ಜೊತೆಗೆ ದೂರು ನೀಡುತ್ತಿರುವುದು ಹಾಗೂ ಪೊಲೀಸರ ಸಹಾಯ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೂರು ನೀಡಲು ಬಂದಿದ್ದ ರೈತನಿಗೆ ಹಳ್ಳಿಯ ಪಶು ವೈದ್ಯರ ಬಳಿ ತೆರಳಲು ಹೇಳಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಳಿಕ ರೈತ ತನ್ನ ಎಮ್ಮೆಯ ಜೊತೆಗೆ ಠಾಣೆಗೆ ಬಂದು, ಎಮ್ಮೆಯು ಹಾಲು ಕೊಡಲು ಅನುಕೂಲ ಮಾಡಿಕೊಟ್ಟ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ.

Join Whatsapp