ಬುಲ್ಲಿ ಭಾಯ್ ಮೊಬೈಲ್ ಅಪ್ಲಿಕೇಷನ್ ಪ್ರಕರಣ: ಪ್ರಮುಖ ಆರೋಪಿ ಅಸ್ಸಾಂನಲ್ಲಿ ಬಂಧನ

Prasthutha|

- Advertisement -

ನವದೆಹಲಿ: ಮುಸ್ಲಿಂ ಮಹಿಳೆಯರನ್ನು ಆನ್ ಲೈನ್ ‘ಹರಾಜಿಗೆ’ ಒಳಪಡಿಸಿದ ಬುಲ್ಲಿ ಭಾಯ್ ಪ್ರಕರಣದ ಪ್ರಮುಖ ಆರೋಪಿ ಎಂದು ನಂಬಲಾದ ವ್ಯಕ್ತಿಯನ್ನು ಅಸ್ಸಾಂನಿಂದ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಉನ್ನತ ಮೂಲಗಳು ಇಂದು ತಿಳಿಸಿವೆ.

ನೀರಜ್ ಬಿಷ್ಣೋಯ್, ಗಿಟ್ ಹಬ್ ಪ್ಲಾಟ್ ಫಾರ್ಮ್ ನಲ್ಲಿ ಬುಲ್ಲಿ ಭಾಯ್ ಆ್ಯಪ್ ರಚಿಸಿದ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ.

- Advertisement -

ಮಹಿಳೆಯರ ಛಾಯಾಚಿತ್ರಗಳೊಂದಿಗೆ ಕೆಟ್ಟ ಟ್ವೀಟ್ ಗಳನ್ನು ಹಾಕಿದ ಪ್ರಮುಖ ಟ್ವಿಟರ್ ಖಾತೆದಾರರೂ ಆತ ಎಂದು ಮೂಲಗಳು ತಿಳಿಸಿವೆ. ಅವರಲ್ಲಿ ಅನೇಕರು ಡಾಕ್ಟರೇಟ್ ಗಳೂ ಇದ್ದಾರೆ ಎನ್ನಲಾಗಿದೆ.



Join Whatsapp