ಹೊಸದಿಲ್ಲಿ: ಬುಲ್ಲಿ ಬಾಯಿ ಅಪ್ಲಿಕೇಶನ್‌ನ ಪ್ರಮುಖ ಆರೋಪಿ, ಸೃಷ್ಟಿಕರ್ತ ಮತ್ತು ಅಪ್ಲಿಕೇಶನ್‌ನ ಮುಖ್ಯ ಟ್ವಿಟರ್ ಖಾತೆದಾರ ನೀರಜ್ ಬಿಷ್ಣೋಯ್ ನನ್ನು ಜನವರಿ 5ರಂದು ದೆಹಲಿ ಪೊಲೀಸ್ ವಿಶೇಷ ಘಟಕ (IFSO) ಅಸ್ಸಾಂನ ಜೋರ್ಹತ್‌ನಲ್ಲಿ ಬಂಧಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ತನಿಖೆಯ ವೇಳೆ ನೀರಜ್ ಬಿಷ್ಣೋಯ್ ಜಾಮೀನು ಅರ್ಜಿಗೆ ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಬುಲ್ಲಿ ಬಾಯ್ ವೆಬ್‌ಸೈಟನ್ನು ರಚಿಸಿದ ಆರೋಪಿಯ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಅವಹೇಳನಕಾರಿನ ಸಂದೇಶಗಳಿವೆ. ಆರೋಪಿಗಳು ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಗುರಿಯಾಗಿಸಲು “ಸುಲ್ಲಿ” ಮತ್ತು “ಬುಲ್ಲಿ ” ಯಂತಹ ಪದಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಡ್ವೊಕೇಟ್ ಇರ್ಫಾನ್ ಅಹ್ಮದ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿ ನೀರಜ್ ಬಿಷ್ಣೋಯ್ ಪರ ವಾದ ಮಂಡಿಸಿದ ವಕೀಲ ಎಲ್. ಓಜಾ, “ನೀರಜ್ ಬಿಷ್ಣೋಯ್ ಅವರನ್ನು ಶಂಕಿತ ಆರೋಪಿಯಾಗಿ ಬಂಧಿಸಲಾಗಿದ್ದು ,ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ.ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಯಾವುದೇ ಅವಹೇಳನಕಾರಿ ಸಂದೇಶಗಳಿಲ್ಲ. ಆದರೂ ಐಟಿ ಕಾಯ್ದೆಯ ಸೆಕ್ಷನ್‌ಗಳನ್ನು ಅವರ ಮೇಲೆ ಹಾಕಲಾಗಿದೆ. ಎಫ್‌ಐಆರ್‌ನಲ್ಲಿ ಕೋಮು ದ್ವೇಷದ ಕುರಿತಾದ ಸೆಕ್ಷನ್ 153 ಎ ಯನ್ನು ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಮಯಾಂಕ್ ರಾವಲ್ (21) ವರ್ಷದ ಶ್ವೇತಾ ಸಿಂಗ್ (19) ವಿಶಾಲ್ ಕುಮಾರ್ ಝಾ ಎಂಬುವವರನ್ನು ಬಂಧಿಸಲಾಗಿತ್ತು. ಪ್ರಕರಣವನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ವಿಚಾರಣೆಯನ್ನು ಜನವರಿ 27 ಕ್ಕೆ ಮುಂದೂಡಿದ್ದು,ಆರೋಪಿ ಪರ ವಕೀಲರ ಆರೋಪಕ್ಕೆ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.