ಬುಲ್ಲಿ ಬಾಯಿ ಪ್ರಕರಣದಲ್ಲಿ ದೂರುದಾರನಿಗೆ ಬೆದರಿಕೆ ಕರೆ : ಪೊಲೀಸರಿಗೆ ದೂರು

Prasthutha|

ನವದೆಹಲಿ: ಬುಲ್ಲಿ ಬಾಯಿ ಪ್ರಕರಣದ ದೂರುದಾರನಿಗೆ ಅಪರಿಚಿತರು ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಮುಂಬೈ ಸೈಬರ್ ಕ್ರೈಮ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ NC ದಾಖಲಿಸಿಕೊಂಡಿದ್ದಾರೆ.

- Advertisement -

ಹೊಸ ವರ್ಷದ ಮುನ್ನಾ ದಿನದಂದು ಬುಲ್ಲಿ ಬಾಯಿ ಆ್ಯಪ್ ನಲ್ಲಿ 126 ಮುಸ್ಲಿಮ್ ಮಹಿಳೆಯರನ್ನು ಆನ್ ಲೈನ್ ನಲ್ಲಿ ಹರಾಜು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿತ್ತು.

ಆ್ಯಪ್ ರಚನೆಕಾರರ ವಿರುದ್ಧ ಕನಿಷ್ಠ ಐದು ರಾಜ್ಯಗಳಲ್ಲಿ ದೂರು ದಾಖಲಿಸಲಾಗಿತ್ತು.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಭಾಗಗಳಿಂದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು.



Join Whatsapp