ಬುಲ್ಡೋಜರ್ ಕಾರ್ಯಾಚರಣೆ ಕಾನೂನು ಪ್ರಕಾರವಾಗಬೇಕೇ ಹೊರತು ಪ್ರತೀಕಾರದ ಕ್ರಮವಾಗಬಾರದು: ಸುಪ್ರೀಂಕೋರ್ಟ್

Prasthutha|

ನವದೆಹಲಿ: ಮನೆಗಳನ್ನು ಧ್ವಂಸಗೊಳಿಸುವ ಬುಲ್ಡೋಜರ್ ಕಾರ್ಯಾಚರಣೆ ಕಾನೂನಿಗೆ ಅನುಗುಣವಾಗಿರಬೇಕೇ ಹೊರತು ಅದು ಪ್ರತೀಕಾರದ ಕ್ರಮವಾಗಬಾರದು ಎಂದು ಸುಪ್ರೀಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಕಿವಿಮಾತು ಹೇಳಿದೆ.

- Advertisement -

ಇತ್ತೀಚೆಗೆ ಪ್ರವಾದಿ ನಿಂದನೆ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ ಎಂದು ಆರೋಪಿಸಿ  ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಜಮೀಯತ್ ಉಲೆಮಾ ಹಿಂದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮುಂದಿನ ಮಂಗಳವಾರ ಪ್ರಕರಣ ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲು ರಾಜ್ಯ ಸರ್ಕಾರ ಮತ್ತು ಪ್ರಯಾಗ್ ರಾಜ್ ಮತ್ತು ಕಾನ್ಪುರದ ಸ್ಥಳೀಯಾಡಳಿತದ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಪೀಠ ತಾಕೀತು ಮಾಡಿದೆ.

- Advertisement -

 “ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು … ಅಧಿಕಾರಿಗಳು ಕಾನೂನಿಗೆ ಅನುಗುಣವಾಗಿ ಮಾತ್ರ ಕಾರ್ಯನಿರ್ವಹಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ” ಎಂದು ನ್ಯಾಯಾಧೀಶರು ಹೇಳಿದರು.

ಆದರೆ ನ್ಯಾಯಾಲಯವು ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ನಿರಾಕರಿಸಿತು.

 “ನಾವು ನೆಲಸಮ ಮಾಡುವುದನ್ನು ತಡೆಹಿಡಿಯಲು ಸಾಧ್ಯವಿಲ್ಲ. ನಾವು ಕಾನೂನಿನ ಪ್ರಕಾರ ಹೋಗಿ ಎಂದು ಹೇಳಬಹುದು.” ಎಂದು ಪೀಠ ಹೇಳಿತು.

ಜಮೀಯತ್ ಉಲಮಾ-ಇ-ಹಿಂದ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ, ಮನೆಗಳನ್ನು “ಕಾನೂನುಬಾಹಿರ” ನೆಲಸಮ ಮಾಡಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿತ್ತು.

ದಮನಿತರ, ದುರ್ಬಲರ ಮೇಲೆ ಅಹಿತಕರವಾದುದು ಏನೂ ನಡೆಯಬಾರದು. ಸರಿಯಾದ ನಡೆ ಮುಖ್ಯ, ತುಳಿತಕ್ಕೊಳಗಾದವರಿಗೆ ಅನ್ಯಾಯವಾಗಬಾರದು. ಅವರಿಗೆ ತೊಂದರೆ ಕೊಡಬಾರದು. ಸರಿಯಾದ ನಿಯಮಾವಳಿ ಪಾಲಿಸಲಾಗಿದೆಯೇ ಎನ್ನುವುದು ನಮ್ಮೆದುರು ಇರುವ ಪ್ರಶ್ನೆ” ಎಂದು ಜಸ್ಟಿಸ್ ಬೋಪಣ್ಣ ಹೇಳಿದರು.

ಜಮಾತ್ ಉಲಮಾ ಹಿಂದ್ ಮಾದರಿಯ ತಪ್ಪು ತಿಳಿವಳಿಕೆಯ ಮೂರನೆಯವರು ಎಂಬ ಉತ್ತರ ಪ್ರದೇಶದ ವಾದವನ್ನು ಸುಪ್ರೀಂ ಕೋರ್ಟು ಮಾನ್ಯ ಮಾಡಲಿಲ್ಲ. ಧ್ವಂಸದ ಬಗೆಗಿನ ಮಾಧ್ಯಮ ವರದಿಯನ್ನು ಮಾತ್ರ ಓದಿದವರು ಇವರು ಎಂಬುದೂ ಸರಕಾರದ ವಾದವಾಗಿತ್ತು.

“ಅಂತಿಮವಾಗಿ ನ್ಯಾಯ ಸಲ್ಲಬೇಕು. ಯಾರು ಕೋರ್ಟಿಗೆ ಬಂದಿದ್ದಾರೆ ಎನ್ನುವುದು ಮುಖ್ಯವಲ್ಲ” ಎಂದು ಜಸ್ಟಿಸ್ ಬೋಪಣ್ಣ ಹೇಳಿದರು.

ಕಟ್ಟಡಗಳು ನಿಯಮ ಅನುಸರಿಸಿರಲಿಲ್ಲ, ಎಲ್ಲರಿಗೂ ಕ್ರಮಪ್ರಕಾರ ನೋಟೀಸು ನೀಡಿ ಉರುಳಿಸಲಾಗಿದೆ ಎಂಬ ವಾದದ ಬಗೆಗೆ ಸವಿವರವಾದ ಅಫಿಡವಿಟ್ ಸಲ್ಲಿಸುವುದಾಗಿ ಉತ್ತರ ಪ್ರದೇಶ ಸರಕಾರದ ಪರ ವಾದಕ್ಕೆ ಸುಪ್ರೀಂ ಕೋರ್ಟು ಅಸ್ತು ಎಂದಿತು. ನ್ಯಾಯ ಪೀಠವು ಡೆಮಾಲಿಶನ್ ನಿಲ್ಲಿಸಬೇಕು ಎಂಬಂಥ ಯಾವುದೇ ಮಧ್ಯಂತರ ಆದೇಶ ನೀಡಲಿಲ್ಲ.  

ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ. ಯು. ಸಿಂಗ್ ಅವರು ಈ ಧ್ವಂಸ ಕಾರ್ಯಾಚರಣೆ ಒಂದೇ ಮಾದರಿ ಉದ್ದೇಶದಿಂದ ನಡೆದಿವೆ ಎಂದರು.

“ಪ್ರತಿಭಟನಾಕಾರರು ಮತ್ತು ಕಲ್ಲು ತೂರಿದರು ಎನ್ನುವವರ ಮೇಲೆ ಉತ್ತರ ಪ್ರದೇಶದ ಆಳುವ ಹಲವರು ದ್ವೇಷಪೂರಿತ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಕಟ್ಟಡ ಉರುಳಿಸಿದರೂ ಅದನ್ನು ಸರಿಯೆನ್ನುವ, ಸಂಭ್ರಮಿಸುವ ಬುಲ್ಡೋಜರ್ ಜನರು ಅಲ್ಲಿದ್ದಾರೆ” ಎಂದು ಸಿಂಗ್ ಹೇಳಿದರು.

ಎಫ್ ಐಆರ್ ನಲ್ಲಿ ಹೆಸರಿಸಲಾದ ಹಲವರ ಮನೆಗಳ ಮೇಲೆ ಬುಲ್ಡೋಜರ್ ಹಾಯಿಸಿ ಅವನ್ನು ನೆಲಸಮ ಮಾಡಲಾಗಿದೆ.

”ಈ ಮನೆಗಳು, ಅಂಗಡಿಗಳು ಕೆಲವು ಪ್ರಕರಣಗಳಲ್ಲಿ ಆರೋಪಿತರ ಪತ್ನಿಗೋ, ಸಂಬಂಧಿಕರಿಗೋ ಸೇರಿದ್ದಾಗಿರುತ್ತದೆ. ಈ ಕಟ್ಟಡಗಳೆಲ್ಲ 20ಕ್ಕೂ ಹೆಚ್ಚು ವರುಷಗಳಿಂದ ಅಸ್ತಿತ್ವದಲ್ಲಿದ್ದವು. ರಾಜ್ಯ ಸರಕಾರವು ಉರುಳಿಸಲು ನಡೆದುಕೊಂಡ ನಿಯಮವು ಒಂದು ಬಗೆಯ ಆಟದಂತಿದೆ. ಇದು ದಿಗ್ಭ್ರಮೆಯ, ಭಯಾನಕ ಕಾರ್ಯಾಚರಣೆ ಆಗಿದೆ” ಎಂದೂ ಹಿರಿಯ ವಕೀಲ ಸಿಂಗ್ ತಿಳಿಸಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಹುಜೇಫಾ ಅಹ್ಮದಿ ಮತ್ತು ನಿತ್ಯಾ ರಾಮಕೃಷ್ಣನ್ ಅವರೂ ಹಾಜರಾದರು. ಇದು ಒಂದು ಕಾಕತಾಳೀಯದಂತಿದೆ. ಆಳುವವರ ಪರ ಏನಾದರೂ ಹೇಳಿದ ಬೆನ್ನಿಗೆ ಅದೇ ರೀತಿಯಲ್ಲಿ, ಅಂಥವರ ಮನೆಗಳು ಉರುಳುತ್ತವೆ ಎಂದು ಅವರು ಹೇಳಿದರು.

“ಆಳುವವರು ಹಣ್ಣು ಹೆಕ್ಕುವ ಆಟದಂತೆ ನಡೆದುಕೊಂಡಿದ್ದಾರೆ. ಬರೇ ಎಫ್ ಐಆರ್ ನಲ್ಲಿ ಹೆಸರು ಇರುವ ವ್ಯಕ್ತಿಗಳ ಮನೆಗಳನ್ನು ಮಾತ್ರ ಆರಿಸಿ ಒಡೆದು ಹಾಕಲಾಗಿದೆ. ರಾತೋ ರಾತ್ರಿ ಇಲ್ಲವೇ ಒಂದೇ ದಿನದಲ್ಲಿ ಬಂದು ನೀವು ಮನೆಗಳನ್ನು ಒಡೆಯುವಂತಿಲ್ಲ. ಎಲ್ಲೂ ಸರಿಯಾದ ನೋಟೀಸು ನೀಡಿಲ್ಲ; ಬಾಧಿತರಿಗೆ ಅಪೀಲು ಹೋಗಲು ಅವಕಾಶ ನೀಡಿಲ್ಲ.”  ಎಂದು ಹುಜೇಫಾ ಹೇಳಿದರು.

“ಸರಿಯಾದ ನೋಟೀಸು ಪ್ರಕಾರ ಡೆಮಾಲಿಶನ್ ನಡೆದಿಲ್ಲ ಎನ್ನಲಾಗಿದೆ; ಈ ವಿಚಾರದಲ್ಲಿ ಕೋರ್ಟು ಕಟ್ಟೆಚ್ಚರದಲ್ಲಿದೆ” ಎಂದು ಜಸ್ಟಿಸ್ ಬೋಪಣ್ಣ ನುಡಿದರು.

ಹಿರಿಯ ವಕೀಲ ಸಿಂಗ್ ಅವರು ಕೆಳಗಿನ ವಿಷಯವನ್ನು ಕೋರ್ಟು ಗಮನಕ್ಕೆ ತಂದರು. ಉತ್ತರ ಪ್ರದೇಶ ನಗರಾಭಿವೃದ್ಧಿ ಯೋಜನೆ ಮತ್ತು ಅಭಿವೃದ್ಧಿ ಕಾಯ್ದೆ 1973ರ 27ನೇ ಸೆಕ್ಷನ್ ನಂತೆ ಯಾವುದೇ ಡೆಮಾಲಿಶನ್ ಗೆ ಮೊದಲು ಬಾಧಿತನಿಗೆ ಕನಿಷ್ಠ 15 ದಿನಗಳ ನೋಟೀಸು ಕಾಲಾವಕಾಶ ನೀಡಬೇಕು. ಆತನಿಗೆ ಅಪೀಲು ಹೋಗಲು 30 ದಿನಗಳ ಕಾಲಾವಕಾಶ ಕೂಡ ನೀಡಬೇಕು ಎಂಬ ನಿಯಮವಿದೆ ಎಂದು ವಿವರಿಸಿದರು.

ಸರಕಾರದ ಪರ ಮೆಹ್ತಾ ಮಧ್ಯ ಪ್ರವೇಶಿಸಿ ದೇಶದ ಎಲ್ಲ ಡೆಮಾಲಿಶನ್ ಗಳನ್ನು ಪ್ರಶ್ನಿಸುವ ಬದಲಿ ವಾಹನ ಮಾದರಿಯ ಅರ್ಜಿಗಳಿಗೆ ಮಾನ್ಯತೆ ನೀಡಬಾರದು. ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ  ಡೆಮಾಲಿಶನ್ ನಡೆದಾಗಲೂ ಇಂಥ ಅರ್ಜಿಗಳು ರಾಶಿ ಬಿದ್ದಿವೆ. ಜಮಾತ್ ಇಲ್ಲಿ ಸಂಬಂಧವಿರುವ ವ್ಯಕ್ತಿ ಅಲ್ಲ. ಯಾವನೇ ಬಾಧಿತ ವ್ಯಕ್ತಿಯು ಸರಿಯಾದ ಗಾಯ ಇಲ್ಲವೇ ದಾಖಲೆಯೊಡನೆ ಕೋರ್ಟಿಗೆ ಹಾಜರಾಗಿಲ್ಲ ಎಂದರು.

ಪ್ರಯಾಗರಾಜ್ ಡೆಮಾಲಿಶನ್ ನಲ್ಲಿ ಸಂಬಂಧಿಸಿದವರಿಗೆ ಮೇ ತಿಂಗಳಿನಲ್ಲಿಯೇ ನೋಟೀಸ್  ನೀಡಲಾಗಿದೆ. ಕಾನ್ಪುರದಲ್ಲಿ ಇಂಥ ಕಾರ್ಯಾಚರಣೆ ನಡೆಸುವಾಗಲೂ ನೋಟೀಸು ನೀಡಲಾಗಿತ್ತು. ಒಂದು ಪ್ರಕರಣದಲ್ಲಂತೂ 2020ರ ಆಗಸ್ಟ್ ನಲ್ಲಿಯೇ ನೋಟೀಸು ನೀಡಲಾಗಿತ್ತು ಎಂದು ಸಾಳ್ವೆ ಹೇಳಿದರು.

“ಮಾಧ್ಯಮಗಳು ಈ ಪ್ರಕರಣಗಳನ್ನು ಕೈಗೆತ್ತಿಕೊಂಡಿವೆ. ರಾಜಕೀಯ ಹೇಳಿಕೆಗಳು ಹೊರಬೀಳುತ್ತಿವೆ, ಮೂರನೆಯ ಪಾರ್ಟಿ ಡೆಮಾಲಿಶನ್ ನಿಲ್ಲಿಸಲು ಕೋರ್ಟು ಮೆಟ್ಟಿಲು ಏರುತ್ತಾರೆ. ಯಾಕೆ ಒಂದು ಕ್ರಮ ಇದರಲ್ಲಿಲ್ಲ? ದಯವಿಟ್ಟು ನಮಗೆ ಅಫಿಡವಿಟ್ ಸಲ್ಲಿಸಲು ಅವಕಾಶ ಕೊಡಿ. ನಾವು ಕೋರ್ಟಿಗೆ ಉತ್ತರಿಸುವೆವು, ಎಲ್ಲ ವಿವರಗಳನ್ನೂ ಅಫಿಡವಿಟ್ ನಲ್ಲಿ ನೀಡುತ್ತೇವೆ” ಎಂದು ಸಾಳ್ವೆ ಹೇಳಿದರು.

ರಾಜ್ಯ ಸರಕಾರರದ ಪಕ್ಕ ಎಲ್ಲವೂ ಸರಿಯಾಗಿದೆ. ಮಾಹಿತಿಪೂರ್ಣವಾಗಿದೆ. ಅರ್ಜಿದಾರರ ಪರ ಇರುವುದು ಮಾಧ್ಯಮ ವರದಿಗಳು ಮತ್ತು ಗಾಳಿ ಮಾತು ಎಂದೂ ಅವರು ಹೇಳಿದರು.

ನ್ಯಾಯಾಲಯವು ಎಲ್ಲವನ್ನೂ ಗಮನಿಸಬೇಕು, ಸರಕಾರವು ಪ್ರತೀಕಾರಕ್ಕಾಗಿ ಯಾರ ಮನೆಯನ್ನೂ ಒಡೆಯುತ್ತಿಲ್ಲ. ಈಗ ಪ್ರಕರಣವನ್ನು ನ್ಯಾಯಾಲಯ ಹಿಡಿದುಕೊಂಡಿದೆ. ನ್ಯಾಯಾಧೀಶರು ನ್ಯಾಯ ಪರಮಾದೇಶಕ್ಕೆ ಮೊದಲು ಇಲ್ಲಿ ಕಾಲ್ಪನಿಕವಾದುದು ಏನೇನೋ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ಡೆಮಾಲಿಶನ್ ಕ್ರಮಪ್ರಕಾರ ನಡೆದಿಲ್ಲವಾದರೆ ಬಾಧಿತರು ನೋವಿಗೀಡಾದವರು, ಅನ್ಯಾಯಕ್ಕೊಳಗಾದವರು ಯಾರೇ ಆದರೂ ಸೂಕ್ತ ದಾಖಲೆಯೊಡನೆ ಕೋರ್ಟಿನಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದು ಸಾಳ್ವೆ ಹೇಳಿದರು.

ನೀವು ನಿಮ್ಮ ತಕರಾರುಗಳನ್ನು ಹೇಳಿ ಅದರ ನಡುವೆ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಜಸ್ಟಿಸ್ ಬೋಪಣ್ಣ ಸ್ಪಷ್ಟಪಡಿಸಿದರು.

Join Whatsapp