ಶಾಹೀನ್ ಬಾಗ್ ನಲ್ಲಿ ಮತ್ತೆ ಬುಲ್ಡೋಜರ್ ಸದ್ದು: ಸ್ಥಳೀಯರಿಂದ ತೀವ್ರ ಪ್ರತಿಭಟನೆ

Prasthutha|

ನವದೆಹಲಿ: ವಿವಾದಿತ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆಯ ಕೇಂದ್ರವಾಗಿದ್ದ ಶಾಹೀನ್ ಬಾಗ್ ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ ಡಿಎಂಸಿ) ಇಂದು ಅತಿಕ್ರಮಣ ತೆರವು ಅಭಿಯಾನವನ್ನು ಆರಂಭಿಸಿದ್ದು, ಸ್ಥಳೀಯರು ತೀವ್ರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

- Advertisement -

ತೆರವು ಕಾರ್ಯಾಚರಣೆಯ ವಿರುದ್ಧ ಸಿಆರ್ ಪಿಎಫ್ ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲು ಪ್ರಾರಂಭಿಸುತ್ತಿದ್ದಂತೆ  ಸ್ಥಳೀಯರು ರಸ್ತೆಗಳಲ್ಲಿ ಕುಳಿತು ಅಭಿಯಾನಕ್ಕಾಗಿ ತಂದಿದ್ದ ಬುಲ್ಡೋಜರ್ ಗಳನ್ನು ತಡೆಯಲು ಪ್ರಯತ್ನಿಸಿದರು.

ಮೊದಲು ಅವರಿಗೆ ನೋಟಿಸ್ ಕಳುಹಿಸಿ ಮತ್ತು ಅವರಿಗೆ ಸಮಯ ನೀಡಿ. ನಾನು ಈ ಬಗ್ಗೆ ಉನ್ನತ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಪರ್ವೇಝ್ ಆಲಂ ಹೇಳಿದರು.

- Advertisement -

ಮೋದಿ ಸರ್ಕಾರ್ ಮುರ್ದಾಬಾದ್ ಘೋಷಣೆಗಳು ಎಲ್ಲೆಡೆ ಕೇಳಿಬಂತು.

ಇಂದು ಬೆಳಗ್ಗೆ ದೆಹಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಭದ್ರತೆಯನ್ನು ಒದಗಿಸಿದರು.

Join Whatsapp