ಸರ್ವರ ಅಭಿವೃದ್ಧಿ ಗ್ಯಾರಂಟಿಯ ಬಜೆಟ್: ಪದ್ಮರಾಜ್. ಆರ್

Prasthutha|

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರು ಮಂಡಿಸಿದ ಬಜೆಟ್‌ನಲ್ಲಿ ಸರ್ವರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್. ಆರ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆ ಸರ್ವ ಜನಾಂಗದ ಉನ್ನತಿಗೆ ಉತ್ತಮ ಕಾರ್ಯಕ್ರಮ ನೀಡಿರುವುದು ಸ್ವಾಗತಾರ್ಹ. ಸಾಮಾಜಿಕ ನ್ಯಾಯದ ನೈಜ ಅನುಷ್ಠಾನಕ್ಕಾಗಿ ಪ್ರತಿಯೊಂದು ವರ್ಗಕ್ಕೂ ಅನುದಾನ ನೀಡಿರುವುದು ಪ್ರಶಂಸನೀಯ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಡೇ ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಬಡಜನರಿಗೆ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವಂತೆ ಮಾಡಿದ್ದಾರೆ ಎಂದರು.

ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆ ಒಳಗೊಂಡಂತೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಆದಾಯದಲ್ಲಿ ಸುಸ್ಥಿರತೆ ಕಂಡುಕೊಳ್ಳಲು ಬೆಂಬಲ ನೀಡಲಾಗಿದೆ. ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೂ 3 ಸಾವಿರ ಕೋಟಿ ರೂ. ವೆಚ್ಚದ ಬೃಹತ್ ಗಾತ್ರದ ಯೋಜನೆಗಳನ್ನು ಅನುಷ್ಠಾನಿಸುವ ಮೂಲಕ ಮೀನುಗಾರ ಮೊಗದಲ್ಲೂ ಮಂದಹಾಸ ಬೀರುವಂತೆ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಕರಾವಳಿಯ ಅಭಿವೃದ್ಧಿಗೂ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಹಿಂದೂಗಳ ಅಂಜನಾದ್ರಿ ಬೆಟ್ಟಕ್ಕೆ 100ಕೋಟಿ ರೂಪಾಯಿ, ಮುಸ್ಲಿಂರ ಹಜ್ ಭವನಕ್ಕೆ 10ಕೋಟಿ ರೂಪಾಯಿ ಹೀಗೆ ಸರ್ವರ ಹಿತವನ್ನು ಗಮನದಲ್ಲಿರಿಸಿ ಅನುದಾನ ಹಂಚಿಕೆ ಮಾಡಿದ್ದು, ಇದೊಂದು ಸರ್ವರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿ ಸ್ಕೀಂಗಳನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ತತ್ವದಂತೆ ಮೀನುಗಾರರ ಅಭಿವೃದ್ಧಿಗೆ ಪ್ರಧಾನ್ಯ, ಹೈನುಗಾರರ ಉನ್ನತಿಗೆ ಮಹತ್ವ, ಉನ್ನತ ಶಿಕ್ಷಣಕ್ಕೆ ನಿರ್ದಿಷ್ಟ ಪ್ರಾಶಸ್ತ್ಯ, ಅನ್ನದಾತರ ಅಭ್ಯುದಯಕ್ಕೆ ಆದ್ಯತೆ, ಸಹಕಾರ ಕ್ಷೇತ್ರದ ಸಮೃದ್ಧಿಗೆ ಪ್ರಾಮುಖ್ಯತೆ ಹೀಗೆ ಪ್ರತಿಯೊಬ್ಬರ ಏಳಿಗೆಯನ್ನು ಬಯಸುವ ಬಜೆಟ್ ನೀಡಿರುವುದು ಅಭಿನಂದನೀಯ ಎಂದು ಹೇಳಿದ್ದಾರೆ.

Join Whatsapp