ಮಠ ಮಾನ್ಯಗಳಿಗೆ ಬಜೆಟ್ ನಲ್ಲಿ ಭರಪೂರ ಕೊಡುಗೆ; ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ 400 ಕೋಟಿ ರೂ.ಅನುದಾನ

Prasthutha|

ಬೆಂಗಳೂರು: ಮಠಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗವನ್ನೇ ಹಾಲಿ ಮುಖ್ಯಮಂತ್ರಿ ಬೊಮ್ಮಾಯಿ ಅನುಸರಿಸಿದ್ದಾರೆ.

- Advertisement -

ಮಠ, ಮಾನ್ಯಗಳಿಗೆ ನಿಗಮ ಮಂಡಳಿಗಳಿಗೆ ಈ ಬಾರಿಯೂ ಭರಪೂರ ಅನುದಾನವನ್ನು ನೀಡುವ ಮೂಲಕ ಮಠಮಾನ್ಯಗಳಿಗೆ ನೀಡುವ ಅನುದಾನ ನೀಡುವ ಪರಂಪರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದುವರೆಸಿದ್ದಾರೆ. ಪ್ರತಿ ವರ್ಷ ಮಾರ್ಚ್ 27 ರಂದು ಕೈವಾರ ತಾತಯ್ಯ ಜಯಂತಿ ಆಚರಿಸುವುದಾಗಿ ಅವರು ಬಜೆಟ್ ನಲ್ಲಿ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 400 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರ ಅಭಿವೃದ್ಧಿ ನಿಗಮಗಳಿಗೆ ತಲಾ 100 ಕೋಟಿ ರೂ.ಗಳನ್ನು ಹಾಗೂ ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ., ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.

- Advertisement -

ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ, ಅತಿ ಹಿಂದುಳಿದ ಸಮುದಾಯಗಳಾದ ತಿಗಳ, ಮಾಳಿ, ಮಾಲಗಾರ, ಕುಂಬಾರ, ಯಾದವ, ದೇವಾಡಿಗ, ಕಿಂಪಿ, ಕ್ಷತ್ರೀಯ, ಮೇದಾರ, ಕುಂಜಿ, ಗುರುಮಾ, ಪಿಂಜಾರ/ನದಾಫ್, ಕುರುಬ, ಬಲಿಜ, ಈಡಿಗ, ಅಡಪದ ಹಾಗೂ ಇತರೆ ಜನಾಂಗದ ಅಭಿವೃದ್ಧಿಗೆ 400 ಕೋಟಿ ರೂ.ಗಳ ಮೊತ್ತದಲ್ಲಿ ಕಾರ್ಯಕ್ರಮ ರೂಪಿಸುವುದಾಗಿಯೂ ಅವರು ಹೇಳಿದ್ದಾರೆ.

Join Whatsapp