ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪಿದರೆ ಮೋದಿ, ಬಿಎಸ್ ವೈ ಹೊಣೆ : ಈಶ್ವರ್ ಖಂಡ್ರೆ ಆಕ್ರೋಶ

Prasthutha|

ಬೀದರ್ : ರಾಜ್ಯದಲ್ಲಿ ಕೋವಿಡ್ ನಿಂದ ಜನರು ತತ್ತರಿಸುತ್ತಿದ್ದು, ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪಿದರೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಈಶ್ವರ್ ಖಂಡ್ರೆ, ಆಕ್ಸಿಜನ್ ಕೊರತೆಯಿಂದ ಪ್ರತಿ ದಿನ 30 ಮಂದಿ ಸಾವನ್ನಪ್ಪುತ್ತಿದ್ದಾರೆ. ಜಿಲ್ಲೆಗೆ 30KL ಆಕ್ಸಿಜನ್ ಅಗತ್ಯವಿದ್ದು, 20KL ಆಕ್ಸಿಜನ್ ನ ಅಭಾವವಿದೆ. ನಿಗದಿತ ಪ್ರಮಾಣ ಆಕ್ಸಿಜನ್ ಪೂರೈಸದಿದ್ದರೆ ಅನಾಹುತ ಆಗಲಿದೆ. ಆಕ್ಸಿಜನ್ ಸಿಗದೇ ಜನ ಬಲಿಯಾದರೆ ಮೋದಿ, ಬಿಎಸ್ ವೈ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಬೀದರ್ ಜಿಲ್ಲೆ ಆಮ್ಲಜನಕದ ಕೊರತೆಯಿಂದಾಗಿ ದಿನಕ್ಕೆ 30 ಜನರು ಬಲಿಯಾಗುತ್ತಿದ್ದಾರೆ. ಆಮ್ಲಜನಕ ಪೂರೈಕೆಯನ್ನು ನಿಯಂತ್ರಿಸದಿದ್ದರೆ ಇದು 50 ಕ್ಕೆ ಏರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

Join Whatsapp