BSP ಶಾಸಕ ರಾಜು ಪಾಲ್ ಕೊಲೆ ಸಾಕ್ಷಿಯ ಹತ್ಯೆ; ಏಳು ಮಂದಿಯ ಬಂಧನ

Prasthutha|

ಲಕ್ನೋ: 2005ರಲ್ಲಿ ನಡೆದಿದ್ದ ಬಿಎಸ್ ಪಿ ಶಾಸಕ ರಾಜು ಪಾಲ್ ಕೊಲೆಯಲ್ಲಿ ಮುಖ್ಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಶುಕ್ರವಾರ ರಾತ್ರಿ ಪ್ರಯಾಗ್’ರಾಜ್’ನ ಅವರ ಮನೆ ಸಮೀಪ ಗುಂಡಿಟ್ಡು ಹತ್ಯೆ ಮಾಡಲಾಗಿದೆ.

- Advertisement -


ಏಳು ಜನರು ಕಚ್ಚಾ ಬಾಂಬುಗಳೊಡನೆ ದಾಳಿ ಮಾಡಿದ್ದಲ್ಲದೆ ಗುಂಡು ಹಾರಿಸಿ ಕೊಂದಿದ್ದಾರೆ. ಈ ದಾಳಿಯಲ್ಲಿ ಸರಕಾರಿ ರಕ್ಷಣೆಯ ಇಬ್ಬರು ಗನ್ನರ್’ಗಳು ಕೂಡ ಗಾಯಗೊಂಡಿದ್ದಾರೆ. ಗನ್ನರ್’ಗಳಲ್ಲಿ ಒಬ್ಬ ಸಂದೀಪ್ ನಿಶಾದ್ ಬಳಿಕ ಆಸ್ಪತ್ರೆಯಲ್ಲಿ ಕೊನೆಯ ಉಸಿರೆಳೆದರು.
ಸಿಸಿಟೀವಿಯಲ್ಲಿ ಈ ದಾಳಿ ಕೊಲೆಯ ಸಂಪೂರ್ಣ ದೃಶ್ಯ ಲಭ್ಯವಾಗಿದೆ. ಪಾಲ್’ರನ್ನು ಕೂಡಲೆ ಸ್ವರೂಪರಾಣಿ ನೆಹರು ಆಸ್ಪತ್ರೆಗೆ ಒಯ್ಯಲಾಯಿತಾದರೂ ಬದುಕುಳಿಯಲಿಲ್ಲ. ಇನ್ನೊಬ್ಬ ಗಾಯಗೊಂಡ ಗನ್ನರ್ ಆಪರೇಶನ್ ಆಗಿದೆ.


ಕೊಲೆಯಾದ ಉಮೇಶ್ ಪಾಲ್ 2005ರ ಬಿಎಸ್ ಪಿ ಶಾಸಕ ರಾಜು ಪಾಲ್ ಕೊಲೆಯಲ್ಲಿ ಮುಖ್ಯ ಸಾಕ್ಷಿಯಾಗಿದ್ದರು. ರಾಜು ಪಾಲ್ ಮುಖ್ಯ ಕೊಲೆಗಾರ ಅತೀಕ್ ಅಹ್ಮದ್ ಗ್ಯಾಂಗಸ್ಟರ್ ಆಗಿದ್ದವನು ರಾಜಕಾರಣಿಯಾಗಿ ಬದಲಾದವನು ಸದ್ಯ ಗುಜರಾತ್ ಜೈಲಿನಲ್ಲಿ ಇದ್ದಾನೆ.
ಸಿಸಿಟೀವಿ ದೃಶ್ಯದ ಆಧಾರದಲ್ಲಿ ದಾಳಿಕೋರರನ್ನು ಗುರುತಿಸಲು ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ.

- Advertisement -


ಇದರ ತನಿಖೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ. ಎರಡು ಕಚ್ಚಾ ಬಾಂಬುಗಳನ್ನು ಎಸೆಯಲಾಗಿದೆ. ಅಲ್ಲದೆ ಉಮೇಶ್ ಪಾಲ್ ಮೇಲೆ ಸಣ್ಣ ಗನ್ ನಿಂದ ಎರಡು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪ್ರಯಾಗ್ ರಾಜ್ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಮನೆಯವರ ದೂರಿನ ಮೇಲೆ ದೂಮನ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp