ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ದೂರ ಸಂಚಾರಿ ನಿಗಮ (ಬಿಎಸ್ಎನ್ಎಲ್) ಬಹಳ ವೇಗವಾಗಿ ಕಂಬ್ಯಾಕ್ ಮಾಡುತ್ತಿದೆ.
ಒಗ್ಗಟ್ಟಿನಿಂದ ರೀಚಾರ್ಜ್ ದರಗಳನ್ನು ಏರಿಕೆ ಮಾಡಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಅ ಸಂಸ್ಥೆಗಳಿಗೆ ಬಿಎಸ್ಎನ್ಎಲ್ ಸಖತ್ ಪೈಪೋಟಿ ನೀಡುತ್ತಿದೆ.
5ಜಿಗೆ ಇನ್ನೂ ಇಳಿದಿಲ್ಲವಾದರೂ 3ಜಿ ಮತ್ತು 4ಜಿ ನೆಟ್ವರ್ಕ್ ಅನ್ನು ಆಫರ್ ಮಾಡುತ್ತಿರುವ ಬಿಎಸ್ಎನ್ಎಲ್ಗೆ ಈಗ ಅದರ ಅಗ್ಗದ ರೀಚಾರ್ಜ್ ದರಗಳೇ ಟ್ರಂಪ್ ಕಾರ್ಡ್ ಎನಿಸಿವೆ.
ಅದರ ಎಲ್ಲಾ ರೀಚಾರ್ಜ್ ದರಗಳೂ ಆಕರ್ಷಕವಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಸಾಕಷ್ಟು ಗ್ರಾಹಕರು ಬಿಎಸ್ಎನ್ಎಲ್ ಕಡೆಗೆ ವಲಸೆ ಹೋಗುವಂತೆ ಮಾಡಿವೆ.
ಬಿಎಸ್ಸೆನ್ನೆಲ್ನ 397 ರೂ ರೀಚಾರ್ಜ್ ಪ್ಲಾನ್
ಬಿಎಸ್ಎನ್ಎಲ್ನ ಜನಪ್ರಿಯ ರೀಚಾರ್ಜ್ ಪ್ಲಾನ್ಗಳಲ್ಲಿ 397 ರೂನದ್ದು ಒಂದು. ಪ್ರತಿಸ್ಪರ್ಧಿ ಕಂಪನಿಗಳು ಇದೇ ಬೆಲೆ ರೀಚಾರ್ಜ್ ದರ ಹೊಂದಿದ್ದರೂ ಅದರ ವ್ಯಾಲಿಡಿಟಿ 28 ದಿನ ಅಥವಾ 30 ದಿನ ಮಾತ್ರವೇ ಇರುವುದು. ಆದರೆ, ಬಿಎಸ್ಸೆನ್ನೆಲ್ನ 397 ರೂ ಪ್ಲಾನ್ ಬರೋಬ್ಬರಿ 150 ದಿನಗಳ ಅವಧಿಯವರೆಗೆ ಇದೆ. ಹೆಚ್ಚೂಕಡಿಮೆ ಐದು ತಿಂಗಳ ಕಾಲ ನೀವು ಸರ್ವಿಸ್ ಪಡೆಯಬಹುದು. ಒಂದು ತಿಂಗಳಿಗೆ ನಿಮಗೆ ಆಗುವ ವೆಚ್ಚ 80 ರೂಗಿಂತಲೂ ಕಡಿಮೆಯೇ.