ರಾಷ್ಟ್ರೀಯ ಭದ್ರತಾ ಉಪಸಲಹೆಗಾರರಾಗಿ ಪಂಕಜ್‌ ಕುಮಾರ್‌ ಸಿಂಗ್‌ ನೇಮಕ

Prasthutha|

ಹೊಸದಿಲ್ಲಿ: ಭಾರತೀಯ ಗಡಿ ಭದ್ರತಾಪಡೆ (BSF) ನಿವೃತ್ತ ಮಹಾನಿರ್ದೇಶಕರಾದ ಪಂಕಜ್‌ ಕುಮಾರ್‌ ಸಿಂಗ್‌ ಅವರು ರಾಷ್ಟ್ರೀಯ ಭದ್ರತಾ ಉಪಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

- Advertisement -

ರಾಜಸ್ಥಾನ್‌ ಕೇಡರ್‌ನ 1998ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಸಿಂಗ್‌, ಮರು ಉದ್ಯೋಗ ಒಪ್ಪಂದದ ಆಧಾರದ ಮೇಲೆ 2 ವರ್ಷಗಳ ಅವಧಿಗೆ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

2022ರ ಡಿ.31ರಂದು ಸಿಂಗ್‌ BSF ಮಹಾನಿರ್ದೇಶಕರ ಸ್ಥಾನದಿಂದ ನಿವೃತ್ತರಾಗಿದ್ದರು. ಅವರ ತಂದೆ, ಪ್ರಕಾಶ್‌ ಸಿಂಗ್‌ ಕೂಡ BSF ಅನ್ನು ಮುನ್ನಡೆಸಿದ್ದರು. ಅವರ ಬೆನ್ನಲ್ಲೇ, ಪಂಕಜ್‌ ಕೂಡ ಸೇನೆಯಲ್ಲಿ ಉನ್ನತ ಸ್ಥಾನ ಅಲಂಕರಿಸಿ, ತಂದೆ-ಮಗ ಇಬ್ಬರೂ BSF ಮುನ್ನಡೆಸಿದ ಇತಿಹಾಸ ಸೃಷ್ಟಿಸಿದ್ದರು.



Join Whatsapp