“ನಿಮ್ಮ ಕಾರ್ಯವು ನನ್ನ ಕಣ್ಣಲ್ಲಿ ನೀರು ತರಿಸಿದೆ”: ಭಗವಂತ್ ಮಾನ್ ಕ್ರಮವನ್ನು ಪ್ರಶಂಸಿಸಿದ ಅರವಿಂದ್ ಕೇಜ್ರಿವಾಲ್

Prasthutha|

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವರನ್ನು  ವಜಾಗೊಳಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಾನ್ ರನ್ನು ಪ್ರಶಂಸಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

- Advertisement -

ಅವರು ತಮ್ಮ ಪೋಸ್ಟ್ ನಲ್ಲಿ “ನಿಮ್ಮ ಬಗ್ಗೆ ಹೆಮ್ಮೆಯಿದೆ ಭಗವಂತ್. ನಿಮ್ಮ ಕಾರ್ಯವು ನನ್ನ ಕಣ್ಣಲ್ಲಿ ನೀರು ತರಿಸಿದೆ. ಇಡೀ ರಾಷ್ಟ್ರವು ಇಂದು ಎಎಪಿ ಬಗ್ಗೆ ಹೆಮ್ಮೆ ಪಡುತ್ತಿದೆ” ಎಂದು ಹೇಳಿದ್ದಾರೆ.



Join Whatsapp