ಸಹೋದರರ ಮುನಿಸು: ಸೋಮಶೇಖರ ರೆಡ್ಡಿ ಮಗನ ಮದುವೆಗೆ ಬಾರದ ಜನಾರ್ದನ ರೆಡ್ಡಿ

Prasthutha|

ಬಳ್ಳಾರಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ರಾಜಕೀಯ ವೈರತ್ವ, ಕುಟುಂಬದ ಮದುವೆಯಲ್ಲೂ ಮುಂದುವರಿದಿದೆ.‌ ನಿನ್ನೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಹಿರಿಯ ಮಗ ಸಂದೀಪ್ ರೆಡ್ಡಿಯ ಮದುವೆಗೆ ಚಿಕ್ಕಪ್ಪ ಜನಾರ್ದನ ರೆಡ್ಡಿ ಊರಲ್ಲಿದ್ದೂ ಹೋಗಲಿಲ್ಲ. ಸಂದೀಪ್ ರೆಡ್ಡಿ ಮದುವೆ ಉದ್ಯಮಿ ಸುಧಾಕರ ರೆಡ್ಡಿ ಮಗಳು ದಿವ್ಯ ಜೊತೆಗೆ ಅದ್ದೂರಿಯಾಗಿ ಆಂಧ್ರದ ನೆಲ್ಲೂರುನಲ್ಲಿ ನಡೆದಿತ್ತು.

- Advertisement -

ಈ ಮದುವೆ ಸಮಾರಂಭಕ್ಕೆ ಹಲವು ರಾಜಕಾರಣಿಗಳು ಪಕ್ಷ ಭೇದ ಮರೆತು ಭಾಗಿಯಾಗಿದ್ದರು. ಆದರೆ ಜನಾರ್ದನ ರೆಡ್ಡಿ ಕುಟುಂಬ ಮಾತ್ರ ಮದುವೆ ಸಮಾರಂಭಕ್ಕೆ ಕಾಲಿಡಲೇ ಇಲ್ಲ.

ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ ಸ್ವಂತ ಅಣ್ಣ ಸೋಮಶೇಖರ್ ರೆಡ್ಡಿಯ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭಾರತ್ ರೆಡ್ಡಿ ಗೆಲುವು ಸಾಧಿಸಿದ್ದರು. ಸೋಮಶೇಖರ್ ರೆಡ್ಡಿ ಸೋಲಿಗೆ ಪರೋಕ್ಷವಾಗಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಕಾರಣರಾಗಿದ್ದರು.

- Advertisement -

ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದಾಗಿನಿಂದಲೂ ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಜೋರಾಗಿಯೇ ಇದ್ದು, ಇದೀಗ ಸೋಮಶೇಖರ್ ರೆಡ್ಡಿ ಮಗನ ಮದುವೆಗೆ ಜನಾರ್ದನ ರೆಡ್ಡಿ ಕುಟುಂಬ ಗೈರಾಗ ಮೂಲಕ ರಾಜಕೀಯ ವೈರತ್ವ ವೈಯಕ್ತಿಕ ಸಂಬಂಧಕ್ಕೂ ವ್ಯಾಪಿಸಿದಂತಾಗಿದೆ.



Join Whatsapp