ಫೈನಲ್‌ನಲ್ಲಿ ಭಾರತ ಸೋತದಕ್ಕೆ ತಮ್ಮನನ್ನು ಕೊಂದ ಅಣ್ಣ, ತಂದೆಗೆ ಗಂಭೀರ ಗಾಯ!

Prasthutha|

ಅಮರಾವತಿ: ಒನ್ ಡೇ ಕ್ರಿಕೆಟ್‌ನಲ್ಲಿ ಭಾರತ ಆಷ್ಟ್ರೇಲಿಯಾ ಎದುರು ಸೋತದ್ದು ಭಾರತೀಯರಿಗೆ ನಿರಾಸೆ ಮೂಡಿಸುವುದು ಸಹಜ. ಇದು ಅತಿರೇಕಕ್ಕೆ ಹೋಗಿ ಇಬ್ಬರು ಆತ್ಮಹತ್ಯೆ ಕೂಡ ಮಾಡಿಕೊಂಡದ್ದೂ ನಡೆದಿದೆ. ಪಂದ್ಯದ ವೇಳೆ ಟಿವಿ ಆಫ್‌ ಮಾಡಿದ್ದಕ್ಕೆ ಮಗನನ್ನೇ ತಂದೆ ಕತ್ತು ಹಿಸುಕಿ ಕೊಂದ ಘಟನೆ ಲಕ್ನೋದಿಂದ ವರದಿಯಾಗಿತ್ತು. ಗಣೇಶ್ ಪ್ರಸಾದ್ ಎಂಬಾತ ಮಗ ದೀಪಕ್‌ನನ್ನು ಕೊಂದಿರೋದು. ಇದರ ನಡುವೆ ವಿಲಕ್ಷಣ ಘಟನೆಯೊಂದು ಅಮರಾವತಿ ಸಮೀಪದ ಅಂಜನಗಾಂವ್ ಬರಿ ಗ್ರಾಮದಲ್ಲಿ ನಡೆದಿದೆ. ಭಾರತ ಸೋತದ್ದಕ್ಕೆ ಸಹೋದರನಿಂದಲೇ ಒಬ್ಬ ಹತ್ಯೆಯಾಗಿದ್ದಾರೆ. ಓರ್ವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ವಿಷಯ ಏನಪ್ಪಾ ಅಂದರೆ,
ರವಿವಾರ ರಮೇಶ ಇಂಗೋಲ್(65) ಮತ್ತು ಅವರ ಮಕ್ಕಳಾದ ಪ್ರವೀಣ್ ಇಂಗೋಲ್ (32), ಅಂಕಿತ್ ಇಂಗೋಲ್ (28) ಜತೆಯಾಗಿ ಮನೆಯಲ್ಲಿ ಕುಳಿತು ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ಮೂವರೂ ಮದ್ಯ ಸೇವಿಸಿದ್ದರು. ಭಾರತ ಸೋಲುತ್ತಿದ್ದಂತೆ ಅಣ್ಣ-ತಮ್ಮಂದಿನ ನಡುವೆ ಜಗಳ ಶುರುವಾಗಿದೆ. ನೀನು ಕುರಿ ಮಾಂಸ ತಿಂದಿದ್ದರಿಂದ ಭಾರತ ಸೋತಿತು ಎಂದು ಪ್ರವೀಣ್ ತಮ್ಮ ಅಂಕಿತ್‌ನ ನ್ನು ನಿಂದಿಸಿದ್ದಾನೆ. ಇದರಿಂದ ಕುಪಿತಗೊಂಡ ಪ್ರವೀಣ್ ತಮ್ಮನಿಗೆ ಅಲ್ಲೆ ಇದ್ದ ಕಬ್ಬಿಣದ ಸರಳು ತಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತಂದೆಯನ್ನೂ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಂಕಿತ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ತಂದೆ ರಮೇಶ್ ಕೂಡ ಗಂಭೀರ ಗಾಯಗೊಂಡಿದ್ದಾರೆ. ಬದನೇರಾ ಪೊಲೀಸರು ಪ್ರವೀಣ್ ವಿರುದ್ಧ ಕಲಂ 302, 307 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರವೀಣ್‌ನನ್ನು ಬಂಧಿಸಿದ್ದಾರೆ.




Join Whatsapp