ಗುಜರಾತ್ ಗೆ ಬಂದಿಳಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್: ಗೌತಮ್ ಅದಾನಿ ಭೇಟಿ ಸಾಧ್ಯತೆ

Prasthutha|

ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಎರಡು ದಿನಗಳ ಭಾರತ ಭೇಟಿಯ ಭಾಗವಾಗಿ ಇಂದು ಬೆಳಿಗ್ಗೆ ಗುಜರಾತ್ ನ ಅಹಮದಾಬಾದ್ ಗೆ ಬಂದಿಳಿದರು. ಅವರು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಅಲ್ಲಿ ಇಬ್ಬರೂ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

- Advertisement -

ಭಾರತಕ್ಕೆ ಹೆಚ್ಚಿನ ವೀಸಾಗಳನ್ನು ನೀಡಲು ತಾವು ಸಿದ್ಧರಿರುವುದಾಗಿ ಜಾನ್ಸನ್ ತಿಳಿಸಿದ್ದು, ಇದು ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ಬಿಲಿಯನ್ ಗಟ್ಟಲೆ ಪೌಂಡ್ಗಳಷ್ಟು ಹೆಚ್ಚಿಸಬಹುದಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಪಡೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಜಾನ್ಸನ್ ಇಂದು ಅಹಮದಾಬಾದ್ ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ನಂತರ ಬ್ರಿಟಿಷ್ ಪ್ರಧಾನಿ ವಡೋದರಾಗೆ ಹೊಗಲಿದ್ದು ಅಲ್ಲಿ ಅವರು ಭಾರಿ ಯಂತ್ರ ಸಂಸ್ಥೆ ಜೆಸಿಬಿಯ ಸ್ಥಾವರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಅವರು ಗಾಂಧಿನಗರದ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಅಥವಾ ಗಿಫ್ಟ್ ಸಿಟಿಗೆ ಹೋಗಲಿದ್ದಾರೆ ಮತ್ತು ಅವರು ಸಂಜೆ ದೆಹಲಿಗೆ ಹೋಗಲಿದ್ದಾರೆ ಎನ್ನಲಾಗಿದೆ.

- Advertisement -

ಜಾನ್ಸನ್ ಅವರ ಭೇಟಿಯು ಭಾರತ ಮತ್ತು ಯುಕೆ ನಡುವಿನ ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೊಸ ಉತ್ತೇಜನವನ್ನು ನೀಡುವ ಸಾಧ್ಯತೆಯಿದ್ದು ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.



Join Whatsapp