ಇಂದು ಬ್ರಿಟನ್‌ ಸಂಸತ್‌ ಚುನಾವಣೆ ಫಲಿತಾಂಶ: ಸುಧಾಮೂರ್ತಿ ಅಳಿಯನ ಭವಿಷ್ಯ ಏನಾಗಲಿದೆ?

Prasthutha|

ಸುಧಾಮೂರ್ತಿ ಅಳಿಯನ ಭವಿಷ್ಯ ಏನಾಗಲಿದೆ?

- Advertisement -

ಲಂಡನ್‌: ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ ಜು. 4ರಂದು ನಡೆದಿದ್ದು, ಇಂದು ಫ‌ಲಿತಾಂಶ ಫ‌ಲಿತಾಂಶ ಪ್ರಕಟವಾಗಲಿದೆ.

ಕನ್ಸರ್ವೆಟಿವ್‌ ಪಕ್ಷದಿಂದ ಪ್ರಧಾನಮಂತ್ರಿ ರಿಷಿ ಸುನಕ್‌ ಹಾಗೂ ಲೇಬರ್‌ ಪಕ್ಷದಿಂದ ಕೀರ್‌ ಸ್ಟರ್ಮರ್‌ ಪ್ರಧಾನಿ ಹುದ್ದೆಗೆ ಸ್ಪರ್ಧೆ ನಡೆಸಿದ್ದಾರೆ.

- Advertisement -

ಹೌಸ್‌ ಆಫ್ ಕಾಮನ್ಸ್‌ (ಸಂಸತ್‌ ಕೆಳಮನೆ)ಒಟ್ಟು 650 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆದು ಸರಕಾರ ರಚಿಸಲು 326 ಸ್ಥಾನಗಳು ಆವಶ್ಯಕವಾಗಿದೆ.

ಕಳೆದ ಚುನಾವಣೆಯಲ್ಲಿ ರಿಷಿ ಸುನಕ್‌ ನೇತೃತ್ವದ ಕನ್ಸರ್ವೆಟಿವ್‌ ಪಕ್ಷ 344 ಕ್ಷೇತ್ರಗಳಲ್ಲಿ ಗೆದ್ದು ಸರಕಾರ ರಚಿಸಿತ್ತು. ಮುಂದಿನ ವರ್ಷದ ಜನವರಿಯಲ್ಲಿ ನಿಗದಿಯಂತೆ ಸಂಸತ್‌ ಚುನಾವಣೆ ನಡೆಯಬೇಕಾಗಿತ್ತು. ಆದರೆ 6 ತಿಂಗಳು ಮೊದಲೇ ಸಂಸತ್‌ ವಿಸರ್ಜಿಸಿ ಚುನಾವಣೆಗೆ ಹೋಗುವ ನಿರ್ಧಾರ ವನ್ನು ರಿಷಿ ಸುನಕ್‌ ಕೈಗೊಂಡಿದ್ದಾರೆ.

ಕನ್ಸರ್ವೆಟಿವ್‌, ಲೇಬರ್‌ ಪಕ್ಷದಿಂದ ಒಟ್ಟು 15 ಭಾರತೀಯ ವ್ಯಯ ಮೂಲದವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪ್ರಧಾನಿ ರಿಷಿ ಸುನಕ್‌, ಅಲೋಕ್‌ ಶರ್ಮಾ, ಗಾಯತ್ರಿ ಸತ್ಯನಾಥ್‌, ಅನಿತಾ ಪ್ರಭಾಕರ್‌ ಇತರರು ಕಣದಲ್ಲಿದ್ದಾರೆ.

ಸದ್ಯ ಕಳೆದ 14 ವರ್ಷಗಳಿಂದ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಅಧಿಕಾರದಲ್ಲಿದೆ. ಈಗ ಅವರು ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಸೋಲುವುದು ಎಕ್ಸಿಟ್ ಪೋಲ್‌ಗಳ ಪ್ರಕಾರ ಬಹುತೇಕ ಖಚಿತವಾಗಿದೆ. ಕಳೆದ 5 ವರ್ಷಗಳಲ್ಲಿ ಕನ್ಸರ್ವೇಟಿವ್ ಪಕ್ಷವು 4 ಬಾರಿ ಪ್ರಧಾನಿಯನ್ನು ಬದಲಾಯಿಸಿದೆ ಎಂಬುದು ಗಮನಾರ್ಹ. ಈ ಬಾರಿ ಕೀರ್ ಸ್ಟಾರ್ಮರ್ಸ್ ಅವರ ಲೇಬರ್ ಪಾರ್ಟಿ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. Ipsos ಎಕ್ಸಿಟ್ ಪೋಲ್ ಪ್ರಕಾರ ಲೇಬರ್ ಪಾರ್ಟಿಗೆ ಭಾರಿ ಬಹುಮತ ಮತ್ತು ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲು ಉಂಟಾಗುವ ಸಾಧ್ಯತೆ ಇದೆ.



Join Whatsapp