ಕಡ್ಡಾಯ ಗ್ರಾಮೀಣ ಸೇವೆ’ ವಿನಾಯ್ತಿ: ಖುಷಿಯಾದ MBBS ವಿದ್ಯಾರ್ಥಿ’ಗಳು

Prasthutha|

ಬೆಳಗಾವಿ: ಎಂಬಿಬಿಎಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡುವುದರಿಂದ ವಿನಾಯ್ತಿ ನೀಡೋ ಸಂಬಂಧವಾಗಿ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದ್ದು, ರಾಜ್ಯದ ನಾನಾ ಕಡೆಯ ವೈದ್ಯ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

- Advertisement -

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 2023ನೇ ಸಾಲಿನಲ್ಲಿ ವೈದ್ಯಕೀಯ ಕೋರ್ಸ್ ಮುಗುಸಿದವರು ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯ್ತಿ ನೀಡುವ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದ್ದಾರೆ.

2023ನೇ ಸಾಲಿನ ಈ ವರ್ಷದಿಂದ ತಿದ್ದುಪಡಿ ವಿಧೇಯಕ ಎರಡು ಸದನಲ್ಲಿ ಅಂಗೀಕಾರಗೊಂಡರೇ, ವೈದ್ಯಕೀಯ ವ್ಯಾಸಂಗ ಮುಗಿಸಿದಂತ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡೋದರಿಂದ ಬಿಲ್ ವಿನಾಯ್ತಿ ನೀಡಲಿದೆ.

- Advertisement -

ಅಂದಹಾಗೇ ಈಗಾಗಲೇ ಎಂಬಿಬಿಎಸ್ ಮುಗಿಸಿದಂತ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಗೈದಿದ್ದಾರೆ. ಗೈಯ್ಯುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರದಿಂದ ಗೌರವ ಧನ ಕೂಡ ನೀಡಲಾಗುತ್ತಿದೆ. ಇದೀಗ ಈ ಕಡ್ಡಾಯ ಗ್ರಾಮೀಣ ಸೇವೆಯಿಂದ ತಿದ್ದುಪಡಿ ಬಿಲ್ ಮಂಡನೆಯಿಂದ ವಿನಾಯ್ತಿ ದೊರೆಯಲಿದೆ. ಇದು ಸಹಜವಾಗಿ ವೈದ್ಯ ವಿದ್ಯಾರ್ಥಿಗಳನ್ನು ಖುಷಿಗೊಳಿಸಿದೆ.



Join Whatsapp