ಮೇಘಾಲಯ | ಭಾರೀ ಮಳೆ, ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ; ನೂರಾರು ಮಂದಿ ಸಾವನ್ನಪ್ಪಿರುವ ಶಂಕೆ !

Prasthutha|

ಗುವಾಹಟಿ: ಮೇಘಾಲಯದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಬುಗಿ ನದಿಯ ಮೇಲಿನ ಸೇತುವೆವೊಂದು ಕೊಚ್ಚಿ ಹೋಗಿದೆ ಎಂದು ತಿಳಿದು ಬಂದಿದೆ. ಬುಗಿ ನದಿಯ ಮೇಲಿನ ಸೇತುವೆ ರೂಗಾವನ್ನು ಜೆಜಿಕಾ ಗ್ರಾಮಕ್ಕೆ ಸಂಪರ್ಕಿಸಿತ್ತು. ಬುಗಿ ಗರೋ ಹಿಲ್ಸ್’ನಲ್ಲಿ ಮೂರನೇ ಅತಿ ದೊಡ್ಡ ನದಿ ಎಂದು ಹೇಳಲಾಗುತ್ತಿದೆ.

- Advertisement -

ಪ್ರಸಕ್ತ ಸಾಲಿನಲ್ಲಿ ಮೇಘಾಲಯದಲ್ಲಿ ತೀವ್ರ ಮಳೆ, ಪ್ರವಾಹ ಮತ್ತು ಭೂಕುಸಿತ ನಡೆದಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಗುರುವಾರ ಮುಂಜಾನೆ ಗಾರೋ ಹಿಲ್ಸ್ ನಲ್ಲಿ ಎರಡು ಕಡೆ ನಡೆದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಮತ್ತು 2 ವರ್ಷದ ಮಗುವೊಂದು ಜೀವಂತ ಸಮಾಧಿಯಾಗಿದ್ದಾರೆ.

- Advertisement -

ಜೂನ್ 10 ರಿಂದ 11 ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಮ್ ಮತ್ತು ಮೇಘಾಲಯದಲ್ಲಿ ಅತೀ ಹೆಚ್ಚು ( 204.5 ಮಿಮೀ ಗಿಂತಲೂ ಅಧಿಕ) ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.



Join Whatsapp