ಆಫ್ರಿಕಾ: ಉದ್ಘಾಟನೆ ವೇಳೆ ಸೇತುವೆ ಕುಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಸೇತುವೆ ನಿರ್ಮಾಣದ ಗುಣಮಟ್ಟವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (ಡಿಆರ್ ಸಿ) ಸೇತುವೆಯನ್ನು ಉದ್ಘಾಟಿಸಲು ಅಧಿಕಾರಿಗಳು ಜಮಾಯಿಸುತ್ತಿದ್ದಂತೆ ಸೇತುವೆ ಕುಸಿದಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಅಲ್ಲಿನ ಜನರು ನಿರ್ಮಾಣದ ಗುಣಮಟ್ಟವನ್ನು ಅಣಕಿಸಿದ್ದಾರೆ.
ಮಳೆಗಾಲದಲ್ಲಿ ನದಿಯನ್ನು ದಾಟಲು ಸ್ಥಳೀಯರಿಗೆ ಸಹಾಯ ಮಾಡಲು ಈ ಸಣ್ಣ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.
“ಈ ಸೇತುವೆಯ ವೆಚ್ಚವು ತೆರಿಗೆದಾರರ ಹಣದ ಒಂದು ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿದ್ದರೆ ಆಶ್ಚರ್ಯಪಡಬೇಡಿ” ಎಂದು ನಾಗರಿಕರೊಬ್ಬರು ಟ್ವೀಟ್ ಮಾಡಿದ್ದಾರೆ.