ಹೃದಯಾಘಾತದಿಂದ ವಧು ಸಾವು: ತಂಗಿಯನ್ನೇ ವರಿಸಿದ ವರ

Prasthutha|

ಗಾಂಧಿನಗರ: ಮದುವೆ ದಿನವೇ ಹೃದಯಾಘಾತದಿಂದ ವಧುವೊಬ್ಬಳು ಮೃತಪಟ್ಟಿದ್ದು, ಅದೇ ವೇದಿಕೆಯಲ್ಲಿ ವಧುವಿನ ತಂಗಿಗೆ ವರ ತಾಳಿ ಕಟ್ಟಿದ ಘಟನೆ ಗುಜರಾತಿನ ಸುಭಾಷ್ ನಗರದ ಭಾವನಗರದಲ್ಲಿ ನಡೆದಿದೆ.

- Advertisement -


ಹೇತಾಲ್ ಹಾಗೂ ವಿಶಾಲ್ ಅವರಿಬ್ಬರಿಗೂ ಮದುವೆ ನಡೆಯುತ್ತಿತ್ತು. ಮದುವೆಯ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಹೇತಾಲ್ ತಲೆ ಸುತ್ತಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಹೇತಾಲ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.


ಹೇತಾಲ್ ನ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ ಮದುವೆಯ ಆಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಹೇತಾಲ್’ನ ತಂಗಿಗೆ ಅದೇ ವೇದಿಕೆಯಲ್ಲಿ ವಿಶಾಲ್ ತಾಳಿ ಕಟ್ಟಿದ್ದಾನೆ.

Join Whatsapp