ಠಾಣೆಯಲ್ಲಿ ಪೇದೆಗೆ ಸೀಮಂತ: ಠಾಣಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

Prasthutha|

ಬೆಂಗಳೂರು: ಕೆಲಸದ ಒತ್ತಡದ ನಡುವೆಯೂ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಪೇದೆ ಹುಲಿಗಮ್ಮ ಅವರಿಗೆ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿ ಠಾಣೆಯಲ್ಲೇ ಸೀಮಂತ ಕಾರ್ಯ ಮಾಡಿದ್ದು, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -


ರಾಜಾಜಿನಗರದ ಸಂಚಾರ ಠಾಣೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳ ಮೂಲದ ಹುಲಿಗಮ್ಮ ಅವರು ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಹುಲಿಗಮ್ಮಗೆ ತಾಯಿ ಸ್ಥಾನದಲ್ಲಿ ನಿಂತು ಠಾಣಾಧಿಕಾರಿ ಶಿವರತ್ನಾ ಹಾಗೂ ಸಿಬ್ಬಂದಿ ಸೀಮಂತ ಕಾರ್ಯ ನಡೆಸಿ ಶುಭ ಹಾರೈಸಿದ್ದಾರೆ.


ಸದಾ ಸಾರ್ವಜನಿಕರ ನಡುವೆಯೇ ಕಾರ್ಯನಿರ್ವಹಿಸುವ ಸಂಚಾರ ಪೊಲೀಸರು, ಕುಟುಂಬ ಮತ್ತು ವೈಯಕ್ತಿಕ ಜೀವನಕ್ಕೆ ಸಮಯ ನೀಡುವುದು ಕಡಿಮೆ. ಹೀಗಾಗಿ, ಕರ್ತವ್ಯದ ಸಮಯದಲ್ಲೂ ಸಾರ್ವಜನಿಕರ ಕೆಲಸಕ್ಕೆ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಿ ಮಧ್ಯಾಹ್ನದ ಊಟದ ಸಮಯಲ್ಲಿ 10 ನಿಮಿಷಗಳಲ್ಲೆ ಸೀಮಂತ ಕಾರ್ಯ ನಡೆಸಿರುವುದು ಎಲ್ಲೆಡೆ ಜನಮೆಚ್ಚುಗೆಗೆ ಪಾತ್ರವಾಗಿದೆ.

Join Whatsapp