ಅಸ್ಪತ್ರೆ ಸೇರಿದ ಬ್ರೆಜಿಲ್‌ನ ಬಲಪಂಥೀಯ ನಾಯಕ ಬೋಲ್ಸನಾರೊ

Prasthutha|

ಬ್ರಸಿಲಾ: ಚುನಾವಣೆ ಸೋತು ಅಮೆರಿಕಕ್ಕೆ ಪಲಾಯನ ಮಾಡಿರುವ ಬಲಪಂಥೀಯ ನಾಯಕ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ ಮಿಶೆಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

- Advertisement -

ಒರ್ಲಾಂಡೋದಲ್ಲಿರುವ ಅವೆಂಡ್ ಹೆಲ್ತ್ ಸೆಲೆಬ್ರೆಷನ್ ಅಕ್ಯೂಟ್ ಕೇರ್ ಆಸ್ಪತ್ರೆಯಲ್ಲಿ ಬೋಲ್ಸನಾರೊ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಬೋಲೊನರೋ ಅವರು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. 2018 ರಲ್ಲಿ ತನ್ನ ಗೆಲುವಿನ ವಿಜಯೋತ್ಸವದ ಸಮಯದಲ್ಲಿ ತನ್ನ ಹೊಟ್ಟೆಗೆ ಇರಿತದಂಥ ದಾಳಿಯಾಗಿತ್ತು, ಅಂದಿನಿಂದ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ.

ಕಳೆದ 2022ರಲ್ಲಿ ನಡೆದ ಚುನಾವಣೆಯಲ್ಲಿ ಸೋತ ಬಳಿಕ ತನ್ನ ಅಧಿಕಾರವನ್ನು ಹೊಸ ಅಧ್ಯಕ್ಷರಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನೂ ಪಾಲಿಸದೆ ಡಿಸೆಂಬರ್ 28 ರಂದೇ ಅವರು ದೇಶ ತೊರೆದು ಅಮೆರಿಕಕ್ಕೆ ಪಲಾಯನ ಮಾಡಿದ್ದರು.



Join Whatsapp