ಲಂಡನ್: ಹೈದರಾಬಾದ್ ಮೂಲದ ವಿದ್ಯಾರ್ಥಿನಿಯನ್ನು ವ್ಯಕ್ತಿಯೊಬ್ಬ ಇರಿದು ಹತ್ಯೆ ಮಾಡಿದ ಘಟನೆ ಲಂಡನ್ ನ ವೆಂಬ್ಲೇ ನಲ್ಲಿ ನಡೆದಿದೆ.
ತೇಜಸ್ವಿನಿ ರೆಡ್ಡಿ ಮೃತ ವಿದ್ಯಾರ್ಥಿನಿ.
ಆಕೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ ಗೆ ತೆರಳಿದ್ದರು. ವಾಸಸ್ಥಳದ ಬಳಿ ಬ್ರೆಜಿಲ್ ನ ವ್ಯಕ್ತಿಯೋರ್ವ ಆಕೆಯನ್ನು ಇರಿದು ಹತ್ಯೆ ಮಾಡಿದ್ದಾನೆ. ರಕ್ತಸ್ರಾವದ ತೀವ್ರತೆಗೆ ತೇಜಸ್ವಿನಿ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
“24 ವರ್ಷದ ಪುರುಷ ಮತ್ತು 23 ವರ್ಷದ ಮಹಿಳೆ ಇಬ್ಬರನ್ನು ಕೊಲೆಯ ಶಂಕೆಯ ಮೇಲೆ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳದೇ ಮಹಿಳೆಯನ್ನು ಬಿಡುಗಡೆ ಮಾಡಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.