ಅಂಪೈರ್ ವಿರುದ್ಧ ಸಿಟ್ಟು: ಹೆಲ್ಮೆಟ್ ನಲ್ಲಿ ಸಿಕ್ಸ್ ಹೊಡೆದ ಬ್ರಾತ್ ವೇಟ್!

Prasthutha|

ಜಾರ್ಜ್ ಟೌನ್: ಅಂಪೈರ್ ನಿರ್ಧಾರಕ್ಕೆ ಅಕ್ರೋಶಗೊಂಡ ವಿಂಡೀಸ್ ಆಲ್ ರೌಂಡರ್ ಕಾರ್ಲೋಸ್ ಬ್ರಾತ್ ವೇಟ್ ಹೆಲ್ಮೆಟ್ ಅನ್ನು ಬ್ಯಾಟಿನಿಂದ ಸಿಕ್ಸ್ ಗೆ ಅಟ್ಟಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

- Advertisement -


ಜಾರ್ಜ್ ಟೌಟ್ ನಲ್ಲಿ ನಡೆಯುತ್ತಿರುವ 2024ರ ಮ್ಯಾಕ್ಸ್ 60 ಕ್ಯಾರೇಬಿಯನ್ ಕ್ವಾಲಿಫೈಯರ್ 1ನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ.


ನ್ಯೂಯಾರ್ಕ್ ಸ್ಟ್ರೈಕರ್ಸ್ ಮತ್ತು ಗ್ರ್ಯಾಂಡ್ ಕೇಮನ್ ಜಾಗ್ವರ್ಸ್ ನಡುವೆ ಪಂದ್ಯ ನಡೆದಿತ್ತು.

- Advertisement -


ಜೊಶುವಾ ಲಿಟ್ಲ್ ಎಸೆದ ಬಾಲ್ ಸ್ಟಂಪ್ಸ್ ಹಿಂದೆ ಕ್ಯಾಚ್ ಆಗುವುದಕ್ಕೂ ಮುನ್ನ, ಆ ಬಾಲ್ ಬ್ರಾತ್ ವೇಟ್ ರ ತೋಳಿಗೆ ಬಡಿದಿತ್ತು. ಆ ಸಂದರ್ಭದಲ್ಲಿ ಬಾಲ್ ಮತ್ತು ಬ್ಯಾಟ್ ನಡುವೆ ಯಾವುದೇ ಸಂಪರ್ಕವಾದಂತೆ ಕಂಡು ಬಂದಿಲ್ಲ. ಆದರೆ, ಎದುರಾಳಿ ತಂಡದ ಆಟಗಾರರು ಕ್ಯಾಚ್ ಮನವಿ ಮಾಡಿದಾಗ, ಅದನ್ನು ಪುರಸ್ಕರಿಸಿದ ಅಂಪೈರ್ ಬ್ರಾತ್ ವೇಟ್ ಔಟ್ ಎಂದು ತೀರ್ಪು ನೀಡಿದ್ದಾರೆ.


ಪೆವಿಲಿಯನ್ ಗೆ ಮರಳುವಾಗ ಕುಪಿತ ಬ್ರಾತ್ ವೇಟ್, ಬೌಂಡರಿ ಗೆರೆಯ ಬಳಿ ಸಮೀಸುತ್ತಿದ್ದಂತೆಯೆ ತಮ್ಮ ಹೆಲ್ಮೆಟ್ ಅನ್ನು ಬ್ಯಾಟ್ ನಿಂದ ಪಾರ್ಕಿನಾಚೆ ಹೊಡೆದಿದ್ದಾರೆ.
ಆದರೂ, ಈ ಪಂದ್ಯದಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು, ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ತಂಡವನ್ನು ಎಂಟು ರನ್ ಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.



Join Whatsapp