ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸೂಪರ್’ಸಾನಿಕ್ ಕ್ಷಿಪಣಿ ಬ್ರಹ್ಮೋಸ್’ನ ವಿಸ್ತೃತ ಆವೃತ್ತಿಯನ್ನು ಭಾರತೀಯ ವಾಯುಪಡೆ ಯಶಸ್ವಿಯಾಗಿ ಪರೀಕ್ಷಿಸಿದೆ.
ಇದನ್ನು ಸುಖೋರು-30MKI ಫೈಟರ್ ಜೆಟ್ (ಯುದ್ಧ ವಿಮಾನ) ನಿಂದ ಉಡಾವಣೆ ಮಾಡಲಾಯಿತು. ಬಂಗಾಳ ಕೊಲ್ಲಿಯಲ್ಲಿ ಎಸ್’ಯು -30 ಎಂಕೆಐ ವಿಮಾನದಿಂದ ಹಡಗಿಗೆ ಗುರಿಯಿಟ್ಟು ನಿಖರವಾದ ದಾಳಿಯನ್ನು ನಡೆಸಿದ ಕ್ಷಿಪಣಿಯು ಅಪೇಕ್ಷಿತ ಮಿಷನ್ ಉದ್ದೇಶಗಳನ್ನು ಸಾಧಿಸಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ಬ್ರಹ್ಮೋಸ್ ಕ್ಷಿಪಣಿಯು 450 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಇದನ್ನು ನೆಲ, ಬಾಹ್ಯಾಕಾಶ ಮತ್ತು ಹಡಗುಗಳಿಂದ ಉಡಾವಣೆ ಮಾಡಬಹುದು. ಇದು ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಚಲಿಸುತ್ತದೆ. ಇದು ಮ್ಯಾಕ್ 2.8 ರ ಗರಿಷ್ಠ ವೇಗವನ್ನು ತಲುಪಬಹುದು. ಇತ್ತೀಚಿನ ಉಡಾವಣೆಯ ಯಶಸ್ಸಿನೊಂದಿಗೆ, ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ.