ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿಯ ಮನೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಬ್ರಾಹ್ಮಣ ಸಮಾಜ!

Prasthutha|

ಭೋಪಾಲ್: ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ನಡೆಸಿದ ಆರೋಪಿಯ ಮನೆ ಪುನರ್‌ನಿರ್ಮಾಣ ಮಾಡಲು ಮಧ್ಯಪ್ರದೇಶದ ‘ಬ್ರಾಹ್ಮಣ ಸಮಾಜ’ವು ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ವರದಿಯಾಗಿದೆ.

- Advertisement -

ಆರೋಪಿ ಪ್ರವೇಶ್ ಶುಕ್ಲಾನ ಮನೆಯನ್ನು ಸ್ಥಳೀಯಾಡಳಿತವು ಧ್ವಂಸಗೊಳಿಸಿತ್ತು. ಸ್ಥಳೀಯಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬ್ರಾಹ್ಮಣ ಸಮಾಜವು ದೇಣಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸಿದೆ.

ಪ್ರವೇಶ್ ನ ತಂದೆ ರಮಾಕಾಂತ್ ಶುಕ್ಲಾ ಅವರ ಬ್ಯಾಂಕ್‌ ಖಾತೆ ಸಂಖ್ಯೆ ಬ್ರಾಹ್ಮಣ ಸಮುದಾಯದ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ರಾಜ್ಯಾದ್ಯಂತ ಇರುವ ಸಮುದಾಯದ ಸದಸ್ಯರು ಹಣ ಕಳುಹಿಸಲು ಪ್ರಾರಂಭಿಸಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.