ಬ್ರಹ್ಮಾವರ: ಮಗುವೊಂದು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಉಪ್ಪೂರು ಸಮೀಪದ ಕೆ.ಜಿ.ರೋಡ್ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್(5) ಎಂದು ಗುರುತಿಸಲಾಗಿದೆ. ನಾರ್ಮನ್ ಅವರ ಕುಟುಂಬ ಇತ್ತೀಚೆಗೆ ಕುವೈತ್ ನಿಂದ ರಜೆ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿತ್ತು ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಮನೆ ಸಮೀಪ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿತ್ತೆನ್ನಲಾಗಿದೆ. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮನೆ ಸಮೀಪದ ನೀರಿನ ಹೊಂಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಮಗು ಆಟ ಆಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ