ಪ್ರೀತಿಸಿದ ಹುಡುಗಿಗೆ ನಿಶ್ಚಿತಾರ್ಥದ ಬೆನ್ನಲ್ಲೇ ಪ್ರಿಯಕರನ ಆತ್ಮಹತ್ಯೆ: ವಿಷಯ ತಿಳಿದು ಯುವತಿಯೂ ನೇಣಿಗೆ ಶರಣು

Prasthutha|

ಬೀದರ್: ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಾಂಧಿಗಂಜ್ ನಲ್ಲಿ ಕಳೆದ ರಾತ್ರಿ ನಡೆದಿದೆ.

- Advertisement -

ಗಾಂಧಿಗಂಜ್ ನ ಲಾಡಗೇರಿ ಬಡಾವಣೆಯ ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದವರು.

ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸಂಗೀತಾ ನಿಶ್ಚಿತಾರ್ಥ ಬೇರೊಂದು ಹುಡುಗನ ಜತೆ ನಡೆದಿತ್ತು. ಶೀಘ್ರದಲ್ಲಿ ಮದುವೆ ಸಹ ನಡೆಯಬೇಕಿತ್ತು.

- Advertisement -

ಇದರಿಂದ ಮನನೊಂದು ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಪ್ರಿಯಕರನ ಸಾವಿನ ಸುದ್ದಿ ಕೇಳಿ ಸಂಗೀತಾ ತನ್ನ ಮನೆಯಲ್ಲಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆಯಯಿಂದ ಎರಡು ಕುಟುಂಗಳ ಸದಸ್ಯರು ಕಂಗಾಲಾಗಿದ್ದಾರೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp