‘ಬಚ್‌ಪನ್ ಕಾ ಪ್ಯಾರ್’ ಖ್ಯಾತಿಯ ಬಾಲಕನಿಗೆ ರಸ್ತೆ ಅಪಘಾತ: ಗಂಭೀರ ಗಾಯ

Prasthutha|

ರಾಂಚಿ: ‘ಬಚ್‌ಪನ್ ಕಾ ಪ್ಯಾರ್’ ಖ್ಯಾತಿಯ ಬಾಲಕ ಸಹದೇವ್ ದಿರಾಡೊಗೆ ರಸ್ತೆ ಅಪಘಾತವಾಗಿ ಗಂಭೀರ ಗಾಯಗೊಂಡಿರುವ ಘಟನೆ ಛತ್ತೀಸ್‌ ಗಢದ ಸುಕ್ಮಾ ಜಿಲ್ಲೆಯಲ್ಲಿ ಸಂಭವಿಸಿದೆ.

- Advertisement -

ಸಹದೇವ್ ದಿರಾಡೊ ವೀಡಿಯೋ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ. ಮಂಗಳವಾರ ರಾತ್ರಿ ಸಹದೇವ್ ತನ್ನ ತಂದೆಯ ಜತೆಗೆ ಮೋಟರ್ ಸೈಕಲ್‌ ನಲ್ಲಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸಹದೇವ್‌ ತಲೆಗೆ ಗಂಭೀರ ಗಾಯಗಳಾಗಿರುವುದರಿಂದ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.



Join Whatsapp