ಟೆಂಪೋ ಟಯರ್ ಅಡಿಗೆ ಸಿಲುಕಿ ಸೈಕಲ್‌ನಲ್ಲಿದ್ದ ಬಾಲಕ ಮೃತ್ಯು

Prasthutha|

ಮೈಸೂರು: ಇಲ್ಲಿನ ಅಭಿಷೇಕ್ ವೃತ್ತದಲ್ಲಿ ಭೀಕರ ಘಟನೆ ನಡೆದಿದೆ. ಟೆಂಪೋ ಟಯರ್ ಅಡಿಗೆ ಸಿಲುಕಿ ಸೈಕಲ್‌ನಲ್ಲಿದ್ದ ಬಾಲಕ ಮೃತಪಟ್ಟಿದ್ದು, ಅದೃಷ್ಟವಶಾತ್ ಮತ್ತೊಬ್ಬ ಬಾಲಕ ಬಚಾವ್ ಆಗಿದ್ದಾನೆ.

- Advertisement -

ವೇಗವಾಗಿ ಸೈಕಲ್‌ನಲ್ಲಿ ಬಂದ ಮಕ್ಕಳು ನಿಯಂತ್ರಿಸಲಾಗದೆ ಚಕ್ರದಡಿಗೆ ಸಿಕ್ಕಿದ್ದಾರೆ. ಮೂಲತಃ ಯಳಂದೂರಿನ ರಾಮಣ್ಣ ಅವರ ಪುತ್ರ ಬಾಲಾಜಿ ಅಲಿಯಾಸ್ ತಿರುಪತಿ ಮೃತ ಬಾಲಕ. ಮತ್ತೊಬ್ಬ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

Join Whatsapp