ನಾಗಾಲ್ಯಾಂಡ್: ಚಂಡಮಾರುತದ ನಡುವೆ ತನ್ನ ಅಂಗಡಿಯನ್ನು ಪುಟ್ಟ ಬಾಲಕನೋರ್ವ ರಕ್ಷಿಸುವ ಹೃದಯವಿದ್ರಾವಕ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿ ಚಂಡಮಾರುತದ ನಡುವೆ ತಮ್ಮ ಅಂಗಡಿಯನ್ನು ಉಳಿಸಿಕೊಳ್ಳಲು ಪುಟ್ಟ ಹುಡುಗ ತನ್ನ ತಾಯಿಗೆ ಸಹಾಯ ಮಾಡುವುದನ್ನು ತೋರಿಸುತ್ತದೆ. ಅಂಗಡಿಯಲ್ಲಿನ ವಸ್ತುಗಳನ್ನು ಭದ್ರಪಡಿಸಲು ಬಾಲಕನ ತಾಯಿ ವಸ್ತುಗಳಿಗೆ ಟರ್ಪಾಲಿನ್ ಹಾಳೆಯನ್ನು ಸುತ್ತಿ ಹಗ್ಗವನ್ನು ಕಟ್ಟುತ್ತಿರುತ್ತಾರೆ. ಇತ್ತಕಡೆ ಅಂಗಡಿ ಮೇಲೆ ಕಟ್ಟಿದ್ದ ಟರ್ಪಾಲಿನ್ ಹಾಳೆ ಗಾಳಿಯ ರಭಸಕ್ಕೆ ಕಿತ್ತು ಹೋಗಬಾರದೆಂದು, ಬಾಲಕ ತನ್ನ ಕೈಗಳಿಂದ ಅದನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ ನಂತರ ಗಾಳಿಯಿಂದ ಹಾರಿಹೋದ ಕುರ್ಚಿಯನ್ನು ಓಡಿ ಹೋಗಿ ತೆಗೆದುಕೊಂಡು ಬಂದು ಅಂಗಡಿಯ ಒಳಗೆ ಇಡುತ್ತಾನೆ. ಇಲ್ಲಿ ಪುಟ್ಟ ಬಾಲಕನ ಜವಬ್ದಾರಿ ಹಾಗೂ ಪ್ರೌಢತೆ ನೋಡುಗರ ಗಮನ ಸೆಳೆದಿದೆ.