ದಾವಣಗೆರೆ: ಅತ್ತೆ ಹಾಗೂ ಸೊಸೆ ಇಬ್ಬರಿಗೂ 2000 ರೂ. ಹಣ ನೀಡಿ. ಇದು ಮನೆಯಲ್ಲಿ ಜಗಳ ತಂದಿಡಲು ಮಾಡಿದ ಯೋಜನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ದಿನ ಬೆಳಗಾದರೆ ರೇಣುಕಾಚಾರ್ಯ ಅವರು ಹಳ್ಳಿ ಹಳ್ಳಿ ಸುತ್ತಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಜನ ಜಾಗೃತಿಗೆ ಮುಂದಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, ಅತ್ತೆ ಹಾಗೂ ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ. ಕಾಂಗ್ರೆಸ್ ನವರು ದಿನಕ್ಕೊಂದು ನಿಬಂಧನೆ ಹಾಕುತ್ತಿದ್ದಾರೆ. ಈ ಹಿಂದೆ ಎಲ್ಲರಿಗೂ ಸೌಲಭ್ಯ ಎಂದರು. ಈಗ ಆದಾಯ ತೆರಿಗೆ ಕಟ್ಟುವವರಿಗೆ ಇಲ್ಲಾ ಎನ್ನುತ್ತಿದ್ದಾರೆ. ಇದು ಮನೆ ಮನೆಯಲ್ಲಿ ಜಗಳ ತಂದಿಡುವ ಕೆಲಸ ಎಂದು ವಾಗ್ದಾಳಿ ನಡೆಸಿದರು.