ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕ ಹೊರತರಲಿದೆಯಂತೆ RSS !

Prasthutha|

ನವದೆಹಲಿ: ಜನರ ಮನಸ್ಸಿನಿಂದ ಅಳಿಸಿ ಹೋಗಿರುವ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕವನ್ನು ಹೊರ ತರುವುದಾಗಿ ಆರೆಸ್ಸೆಸ್ ಹೇಳಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಮಾಹಿತಿಗಳನ್ನು ಕಲೆ ಹಾಕಿ, ಅವರ ಕುರಿತ ಪುಸ್ತಕವನ್ನು ಹೊರತರಲು ತನ್ನ ಅಂಗ ಸಂಸ್ಥೆಗಳ ಸಂಶೋಧಕರಿಗೆ ಸೂಚನೆ ನೀಡಿದೆ. ಜನರ ಮನಸ್ಸಿನಿಂದ ಅಳಿಸಿ ಹೋಗಿರುವ ಕೆಲವು ಸ್ವಾತಂತ್ರ್ಯ ಹೊರಾಟಗಾರರ ಜೀವನ ಚರಿತ್ರೆ ಕುರಿತ ಪುಸ್ತಕ ಇದಾಗಿರಲಿದೆ ಎಂದು ಹೇಳಿದೆ.

- Advertisement -

ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಇತಿಹಾಸ ಸಂಕಲನ ಸಮಿತಿ, ಲೋಕ ಪ್ರಗ್ಯಾ ಸೇರಿದಂತೆ ಇತರ ಸಂಸ್ಥೆಗಳು ಪುಸ್ತಕ ಬಿಡುಗಡೆಗಾಗಿ ಆರ್ಎಸ್ಎಸ್ ನೊಂದಿಗೆ ಕೈಜೋಡಿಸಲಿವೆ ಎನ್ನಲಾಗಿದೆ. ಈ ಕಾರ್ಯಕ್ಕಾಗಿ RSS ತನ್ನ ವಿವಿಧ ಅಂಗಸಂಸ್ಥೆಗಳ ಕಾರ್ಯಕರ್ತರನ್ನು ನಿಯೋಜಿಸಿದೆ. ಯುವ ಜನರಿಗೆ ಪರಿಚಯವಿಲ್ಲದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪತ್ತೆ ಹಚ್ಚಿ, ಅವರ ಮಾಹಿತಿಯನ್ನು ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ.

ಬಸಂತ್ ಕುಮಾರ್ ಬಿಸ್ವಾಸ್, ಪಾರುಲ್ ಮುಖರ್ಜಿ, ಮೋತಿ ಲಾಲ್ ರಾಯ್, ಕನಯ್ ಲಾಲ್ ದತ್ತಾ, ಅಲ್ಲಾಸ್ಕರ್ ದತ್ತಾ, ದುಕಾರಿ ಬಾಲಾ ದೇವಿ, ಸತೀಶ್ ಚಂದ್ರ ಸಮಂತಾ, ನಾನಿಬಾಲಾ ದೇವಿ, ಬೀನಾ ದಾಸ್, ಸತ್ಯೇಂದ್ರನಾಥ ಬಸು, ಕುಂದ್ರಪ್ರಭಾ ಸೇನ್ ಗುಪ್ತಾ, ಪುಲಿನ್ ಬಿಹಾರಿ ದಾಸ್, ಮನೋರಂಜನ್ ಸೇನ್, ತಾರಕ್ ನಾಥ್ ದಾಸ್ ಸೇರಿದಂತೆ ಕೆಲವೊಂದು ಸ್ವಾತಂತ್ರ್ಯ ಹೋರಾಟಗಾರರ ಪರಿಚಯವು ಇಂದಿನ ಯುವ ಜನರಿಗೆ ಇಲ್ಲ, ನಿಟ್ಟಿನಲ್ಲಿ ಇವರ ಜೀವನ ಚರಿತ್ರೆಗಳ ಪುಸ್ತಕಗಳನ್ನು ಹೊರತರುತ್ತೇವೆ ಎಂದು ಆರೆಸ್ಸೆಸ್ ಹೇಳಿದೆ.

- Advertisement -

ಬಿಡುಗಡೆಯಾಗಲಿರುವ ಪುಸ್ತಕಗಳಲ್ಲಿ 47 ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಮಾಹಿತಿಯೂ ಇರಲಿದ್ದು, ಜನವರಿ ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ , ಸದ್ಯಕ್ಕೆ ಮಾಹಿತಿಯನ್ನಷ್ಟೇ ಒದಗಿಸುತ್ತೇವೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೌಸುಮಿ ಕರ್ಮಾರ್ಕರ್ ಹೇಳಿದ್ದಾರೆ. ಅಲ್ಲದೇ ಈ ಪುಸ್ತಕವು ಯುವಜನರಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಹೋರಾಟದ ಕುರಿತು ಉತ್ತಮ ಮಾಹಿತಿಯನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.



Join Whatsapp