ಮಂಗಳೂರು : ಟಿಪ್ಪು ಸುಲ್ತಾನ್ ಫ್ಯಾನ್ಸ್ ಅಸೋಸಿಯೇಷನ್ (ರಿ) ಕಿನ್ಯಾ ಇದರ ವತಿಯಿಂದ ಇಂದು (ನವೆಂಬರ್26) ಸಂವಿಧಾನ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆ ನೀಡಿ ಮತ್ತು ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ, ಸದಸ್ಯರಾದ ಸೈಯದ್ ತಾಹಾ ತಂಗಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ, ಬಿ ರಿಜ್ವಾನ್ ಕಿನ್ಯಾ, ಟಿಪ್ಪು ಸುಲ್ತಾನ್ ಫ್ಯಾನ್ಸ್ ಅಸೋಸಿಯೇಷನ್ (ರಿ) ಕಿನ್ಯಾ ಇದರ ಅಧ್ಯಕ್ಷರಾದ ಮುಜಾಮಿಲ್ ಕಾರ್ಯದರ್ಶಿ ಇರ್ಷಾದ್ ಮತ್ತು ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಸೇರಿ ಗ್ರಂಥಪಾಲಕಿ ಸೌಮ್ಯ ಅವರಿಗೆ ಪುಸ್ತಕ ಹತ್ತಾಂತರ ಮಾಡಿದರು.