ಸಿಎಂ ಬೊಮ್ಮಾಯಿ “ಕ್ರಿಮಿನಲ್ಸ್ ಕೇರ್ ಟೇಕರ್ ಮಿನಿಸ್ಟರ್” ಆಗಿದ್ದಾರೆ: ಕಾಂಗ್ರೆಸ್

Prasthutha|

ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಗುತ್ತಿಗೆದಾರ ಪ್ರದೀಪ್ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಶಾಸಕ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ವಿರುದ್ಧ ಎಫ್’ಐಆರ್ ದಾಖಲಾಗಿದ್ದು, ಸಿಎಂ ಬೊಮ್ಮಾಯಿ “ಕ್ರಿಮಿನಲ್ಸ್ ಕೇರ್ಟೇಕರ್ ಮಿನಿಸ್ಟರ್” ಆಗಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ರಕ್ಷಣೆ ಮಾಡಲಾಗಿದೆ. ಮತ್ತೊಬ್ಬ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲೂ ಅಧಿಕಾರಿಗಳ ರಕ್ಷಣೆ ಮಾಡಲಾಗಿದೆ. ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ರಕ್ಷಣೆ ಮಾಡಲಾಗುತ್ತದೆ. ಸಿಎಂ ಬೊಮ್ಮಾಯಿ ಅವರು CCM ಆಗಿದ್ದಾರೆ – “ಕ್ರಿಮಿನಲ್ಸ್ ಕೇರ್ಟೇಕರ್ ಮಿನಿಸ್ಟರ್” ಎಂದು ಟೀಕಿಸಿದೆ.


ಗುತ್ತಿಗೆದಾರ ಪ್ರದೀಪ್ ಸಾವಿಗೂ ಮುನ್ನ ಶಾಸಕ ಅರವಿಂದ ಲಿಂಬಾವಳಿ, ಗೋಪಿ.ಕೆ, ಸೋಮಯ್ಯ, ಜಿ.ರಮೇಶ್ ರೆಡ್ಡಿ, ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರುಗಳನ್ನು ಉಲ್ಲೇಖಿಸಿ ಪ್ರದೀಪ್ ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.

- Advertisement -


ಡೆತ್ ನೋಟ್ ಪ್ರಕಾರ 2 ಕೋಟಿ 20 ಲಕ್ಷ ಬರಬೇಕಿದ್ದು, ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಕೂಡಾ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು ಎಂದು ಉಲ್ಲೇಖಿಸಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Join Whatsapp