ಭುವನೇಶ್ವರ: ಕಿಯೋಂಜರ್ ಸದರ್ ಕ್ಷೇತ್ರದ ಶಾಸಕ ಮೋಹನ್ ಮಾಹ್ಜಿ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದ ಘಟನೆ ಇಂದು ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಿಯೋಂಜರ್ ಶಾಸಕರು ಸಾರ್ವಜನಿಕ ಸಭೆಯಿಂದ ಹಿಂದಿರುಗುತ್ತಿದ್ದಾಗ ಬೈಕಿನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಬಾಂಬ್ ದಾಳಿ ಮಾಡಿದ್ದಾರೆ.
ಪ್ರಸಕ್ತ ದಾಳಿಯಿಂದ ಶಾಸಕ ಮೋಹನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಈ ದಾಳಿಯಿಂದಾಗಿ ಅವರ ವಾಹನಕ್ಕೆ ಭಾಗಶಃ ಹಾನಿಗೊಳಗಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಿಯೋಂಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.