ರಾಷ್ಟ್ರಗೀತೆಗೆ ಅಗೌರವ: ಮಮತಾ ಬ್ಯಾನರ್ಜಿ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ರಾಷ್ಟ್ರಗೀತೆಗೆ ಅಗೌರವ ತೋರಿದ್ದಾಗಿ ಆರೋಪಿಸಿ ಬಿಜೆಪಿ ನಾಯಕರೊಬ್ಬರು ತಮ್ಮ ವಿರುದ್ಧ ನೀಡಿದ್ದ ಕ್ರಿಮಿನಲ್‌ ದೂರನ್ನು ರದ್ದುಗೊಳಿಸುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಸಿಎಂ) ಮಮತಾ ಬ್ಯಾನರ್ಜಿ ಅವರು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.
ಆದೇಶ ನೀಡಿದ ನ್ಯಾ. ಅಮಿತ್‌ ಬೋರ್ಕರ್ ಅವರು ಸೆಷನ್ಸ್ ನ್ಯಾಯಾಧೀಶರು ಮೆರಿಟ್ ಗಳ ಮೇಲೆ ದೂರನ್ನು ನಿರ್ಧರಿಸದೆ ಅಥವಾ ಅರ್ಹತೆಗಳ ಮೇಲೆ ನಿರ್ಣಾಯಕವಾಗಿ ದಾಖಲಿಸಿಕೊಳ್ಳದೆ ಪ್ರಕರಣವನ್ನು ಮರಳಿಸಿರುವುದು 2013ರ ನ್ಯಾಷನಲ್‌ ಬ್ಯಾಂಕ್ ಆಫ್ ಒಮನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶಕ್ಕೆ ಅನುಗುಣವಾಗಿಲ್ಲ ಎಂದರು.



Join Whatsapp